ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕಾಲೇಜುಗಳ ಮಾಹಿತಿ ಪಡೆದು ಪಿಯುಸಿ ಮಕ್ಕಳನ್ನು ದಾಖಲಿಸಿ:ಪಿಯು ಇಲಾಖೆ ಸೂಚನೆ:

ಕಾಲೇಜುಗಳ ಮಾಹಿತಿ ಪಡೆದು ಪಿಯುಸಿ ಮಕ್ಕಳನ್ನು ದಾಖಲಿಸಿ:ಪಿಯು ಇಲಾಖೆ ಸೂಚನೆ:

 

 

ಬೆಂಗಳೂರು:ಕಾಲೇಜುಗಳ ಸರಿಯಾದ ಮಾಹಿತಿ ಪಡೆದುಕೊಂಡು ಮಕ್ಕಳನ್ನು ದಾಖಲಿಸಿ,ಈಗಾಗಲೇ ರಾಜ್ಯದ ಎಲ್ಲ ಕಾಲೇಜುಗಳ ಮಾಹಿತಿಯನ್ನು ಇಲಾಖೆಯ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಪಿಯುಸಿ ಮಕ್ಕಳನ್ನು ದಾಖಲಿಸಲು ಬಯಸುವ ಪಾಲಕರು ಕಾಲೇಜಿನ ವಿಳಾಸ, ಕೋರ್ಸ್, ಮತ್ತು ಮಾನ್ಯತೆ ನವೀಕರಣ ಖಚಿತ ಪಡಿಸಿಕೊಳ್ಳಬೇಕು ಎಂದು ಪದವಿ ಪೂರ್ವ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.ಈ ಬಗ್ಗೆ ಪ್ರಕಟನೆ ಹೊರಡಿಸಿರುವ ಅವರು ಇಲಾಖೆಯಿಂದ ಅನುಮೋದನೆ ಪಡೆದಿರುವ ಸ್ಥಳಗಳನ್ನು ಬಿಟ್ಟು ಬೇರೆ ಕಡೆಗಳಲ್ಲಿ ಪಾಠ ನಡೆಸುತ್ತಿರುವ ಹಾಗೂ ಖಾಸಗಿ ತರಬೇತಿ ಮತ್ತು ಕೋಚಿಂಗ್ ಕೇಂದ್ರಗಳಲ್ಲಿ ತರಗತಿಗಳನ್ನು ನಡೆಸುತ್ತಿರುವ ಕೆಲವು ಪದವಿ ಪೂರ್ವ ಕಾಲೇಜುಗಳ ಮಾಹಿತಿ ಲಭ್ಯವಾಗಿದ್ದು, ಇಂತಹ ಸಂಸ್ಥೆಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.ಕೆಲವು ಕಾಲೇಜುಗಳ ಆಡಳಿತ ಮಂಡಳಿಗಳು ಹೊಸ ಕಾಲೇಜಿಗೆ ಮುಂದೆ ಅನುಮತಿ ಪಡೆಯಲಾಗುತ್ತದೆ. ಹೊಸ ವಿಭಾಗ ಆರಂಭಿಸಲಾಗುತ್ತದೆ, ತರಗತಿಗಳನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತದೆ ಎಂಬ ಮೌಖಿಕ ಭರವಸೆಗಳನ್ನು ನೀಡುತ್ತಿದ್ದು, ಇಂತಹ ಭರವಸೆಗಳು ಅಥವಾ ತಪ್ಪು ಮಾಹಿತಿಗಳನ್ನು ನಂಬಬಾರದು ಎಂಬ ಸಲಹೆಯನ್ನು ಇಲಾಖೆ ನೀಡಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!