ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ವಿಧಾನಪರಿಷತ್ ಚುನಾವಣಾ ಫಲಿತಾಂಶ ಘೋಷಣೆ:ಕಾಂಗ್ರೆಸ್ 05 ಬಿಜೆಪಿ 02 ಗೆಲುವು, ಜೆಡಿಎಸ್ ಗೆ ಸೋಲು: ಅಡ್ಡ ಮತದಾನದ ಆಘಾತ:

ವಿಧಾನಪರಿಷತ್ ಚುನಾವಣಾ ಫಲಿತಾಂಶ ಘೋಷಣೆ:ಕಾಂಗ್ರೆಸ್ 05 ಬಿಜೆಪಿ 02 ಗೆಲುವು, ಜೆಡಿಎಸ್ ಗೆ ಸೋಲು: ಅಡ್ಡ ಮತದಾನದ ಆಘಾತ:

 

 

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್​ಗಾಗಿ ಇಂದು ನಡೆದ 7 ಸ್ಥಾನಗಳ ಚುನಾವಣೆಯ ಫಲಿತಾಂಶ ಘೋಷಣೆಯಾಗಿದೆ. ನಿರೀಕ್ಷೆಯಂತೆ ಕಾಂಗ್ರೆಸ್​ನ 5, ಬಿಜೆಪಿಯ 2 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಜೆಡಿಎಸ್ ಅಭ್ಯರ್ಥಿ ಸೋಲು ಕಂಡಿದ್ದಾರೆ.

ವಿಧಾ‌ನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್​ನ ಐದು ಅಭ್ಯರ್ಥಿಗಳಾದ ಬಿ.ಕೆ.ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರು, ಪಿ.ವಿ.ಮೋಹನ್, ಶಿವಣ್ಣ ಬಿ.ಎಸ್., ವಿನಯ್ ಕಾರ್ತಿಕ್ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಪಕ್ಷದಿಂದ ರಘು ಕೌಟಿಲ್ಯ ಹಾಗೂ ಲಿಂಗರಾಜ ಪಾಟೀಲ್ ಗೆಲುವು ಸಾಧಿಸಿದ್ದಾರೆ. ಇನ್ನು ಜೆಡಿಎಸ್ ಪಕ್ಷ ಗೋವಿಂದ ರಾಜು ಸೋಲು ಕಂಡಿದ್ದಾರೆ.

ಬಿಜೆಪಿ, ಜೆಡಿಎಸ್​ಗೆ ಅಡ್ಡಮತದಾನದ ಆಘಾತ:

ಚುನಾವಣೆಯಲ್ಲಿ ಬಿಜೆಪಿಗೆ ಹಾಗೂ ಜೆಡಿಎಸ್​ಗೆ ಅಡ್ಡಮತದಾನದ ಆಘಾತ ಎದುರಾಗಿದೆ. ಬಿಜೆಪಿಯಿಂದ 3 ಅಡ್ಡಮತದಾನ ನಡೆದರೆ, ಜೆಡಿಎಸ್​ನಿಂದ 4 ಅಡ್ಡಮತದಾನ ನಡೆದಿದೆ. ಆ ಮೂಲಕ ಕಾಂಗ್ರೆಸ್ ಅಭ್ಯರ್ಥಿಗಳ ಪರ ಒಟ್ಟು 7 ಅಡ್ಡ ಮತದಾನ ಆಗಿವೆ.‌

ಜೆಡಿಎಸ್ ಅಭ್ಯರ್ಥಿ ಗೋವಿಂದ ರಾಜುಗೆ 14 ಮತಗಳು ಬಿದ್ದು, ಸೋಲು ಅನುಭವಿಸಿದ್ದಾರೆ. ಅಚ್ಚರಿ ಎಂಬಂತೆ ಅಡ್ಡಮತದನಾದ ಫಲಶೃತಿಯಾಗಿ ಕಾಂಗ್ರೆಸ್ ಐದನೇ ಅಭ್ಯರ್ಥಿ ವಿನಯ್ ಕಾರ್ತಿಕ್​ಗೆ 32 ಮತಗಳು ಬೀಳುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಬಿಜೆಪಿಯ ಇಬ್ಬರು ಅಭ್ಯರ್ಥಿಗಳಿಗೆ ತಲಾ 30 ಮತಗಳನ್ನು ಹಾಕಲು ಬಿಜೆಪಿ ಶಾಸಕರಿಗೆ ಸೂಚನೆ ನೀಡಲಾಗಿತ್ತು. ಆದರೆ, ರಘು ಕೌಟಿಲ್ಯಗೆ ಒಟ್ಟು 29 ಸಿಂಧು ಮತಗಳು ಬಿದ್ದಿದ್ದು, ಅವರಿಗೆ ಬಿದ್ದ 1 ಮತ ಅಸಿಂಧುವಾಗಿದೆ. ಇತ್ತ ಬಿಜೆಪಿ ಅಭ್ಯರ್ಥಿ ಲಿಂಗರಾಜ್ ಪಾಟೀಲ್ ಅವರಿಗೆ 27 ಮೊದಲ ಪ್ರಾಶಸ್ತ್ಯದ ಮತಗಳು ಬಿದ್ದಿವೆ. ಅವರಿಗೆ ಬೀಳಬೇಕಿದ್ದ 30 ಮತಗಳ ಪೈಕಿ 3 ಮತಗಳು ಅಡ್ಡಮತದಾನವಾಗಿದೆ.

ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಿದ್ದ ಮತ ಎಷ್ಟು?:

ಬಿ.ಕೆ. ಹರಿಪ್ರಸಾದ್ - 30 ಪಿ.ವಿ. ಮೋಹನ್ - 29 ಬಿ.ಎಸ್. ಶಿವಣ್ಣ - 30 ತಿಪ್ಪಣಪ್ಪ ಕಮಕನೂರ - 30 ವಿನಯ್ ಕಾರ್ತಿಕ್ - 32

ಬಿಜೆಪಿ ಅಭ್ಯರ್ಥಿಗಳಿಗೆ ಬಿದ್ದ ಮತ ಎಷ್ಟು?:

ರಘು ಕೌಟಿಲ್ಯ - 29 ಲಿಂಗರಾಜ ಪಾಟೀಲ್ - 27

ಜೆಡಿಎಸ್ ಅಭ್ಯರ್ಥಿಗೆ ಬಿದ್ದ ಮತ ಎಷ್ಟು?:

ಗೋವಿಂದರಾಜು -14

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!