ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಇಂದಬೆಟ್ಟು ಹೃದಯಾಘಾತದಿಂದ ಯುವಕ ಕುಸಿದು ಬಿದ್ದು ಸಾವು:

ಇಂದಬೆಟ್ಟು ಹೃದಯಾಘಾತದಿಂದ ಯುವಕ ಕುಸಿದು ಬಿದ್ದು ಸಾವು:

 

 

 

ಬೆಳ್ತಂಗಡಿ: ಯುವಕನೊಬ್ಬ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಇಂದಬೆಟ್ಟು ವಿನಲ್ಲಿ ಭಾನುವಾರ  ನಡೆದಿದೆ.

ಇಂದಬೆಟ್ಟು ಗ್ರಾಮದ ಪಲ್ಲದಕೋಡಿ ದಿವಂಗತ ಜಯಪೂಜಾರಿ ಎಂಬವರ ಪುತ್ರ ಜಗದೀಶ್ (35) ಭಾನುವಾರ ರಾತ್ರಿ ಊಟ ಮಾಡಿ ಮಲಗಿದ್ದು ಮಧ್ಯರಾತ್ರಿ ಸುಮಾರು ಎರಡು ಗಂಟೆ ಸುಮಾರಿಗೆ ಜೋರು ಕೆಮ್ಮು ಬಂದಿದ್ದು ಈ ವೇಳೆ  ಮನೆ ಹೊರಗೆ ಇದ್ದ ಬಾತ್ ರೂಂ ಗೆ  ಹೋಗಿದ್ದಾರೆ.ಅದರೆ ಹೊರಗೆ ಹೋದ ಮಗ ಸುಮಾರು   ಹೊತ್ತಾದರೂ ಬಾರದೇ ಇದ್ದ ವೇಳೆ   ತಾಯಿ ಹೋಗಿ ನೋಡಿದಾಗ ಜಗದೀಶ್ ಬಾತ್ ರೂಂ ಹೊರಗೆ  ಬಿದಿದ್ದು  ತಕ್ಷಣ ಮನೆಯವರು ಅವರನ್ನು  ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.ಅದರೆ  ಅಲ್ಲಿ ವೈದ್ಯರು ಪರೀಕ್ಷಿಸಿ ಸಾವನ್ನಪ್ಪಿರುವ ಬಗ್ಗೆ ಧೃಢಪಡಿಸಿದ್ದಾರೆ, ಮೃತ ಜಗದೀಶ್ ಕಳೆದ 12 ವರ್ಷಗಳಿಂದ ಮಡಂತ್ಯಾರ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತಿದ್ದು, ತಾಯಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!