ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಭಾರತೀಯ ವಾಯುಪಡೆಯ ವಿಮಾನ ಪತನ, ಐವರು ಪೈಲಟ್ ಗಳ ಸಾವು ತನಿಖೆಗೆ ಆದೇಶ:

ಭಾರತೀಯ ವಾಯುಪಡೆಯ ವಿಮಾನ ಪತನ, ಐವರು ಪೈಲಟ್ ಗಳ ಸಾವು ತನಿಖೆಗೆ ಆದೇಶ:

 

 

 

ದೆಹಲಿ: ಅಸ್ಸಾಂನಲ್ಲಿ ಭಾರತೀಯ ವಾಯುಪಡೆಯ AN-32 ವಿಮಾನ ಪತನಗೊಂಡು ಐವರು IAF ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಈ ಕುರಿತು ವಿಚಾರಣೆಗೆ ಆದೇಶಿಸಲಾಗಿದೆ. ಘಟನೆ ಸಂಭವಿಸಿದಾಗ AN-32 ವಿಮಾನವು ಜೋರ್ಹತ್‌ನ ರೌರಿಯಾ ಪ್ರದೇಶದಲ್ಲಿರುವ IAF ವಾಯುನೆಲೆಯಲ್ಲಿ ಇಳಿಯುತ್ತಿತ್ತು ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ಮೃತರನ್ನು ಸ್ಕ್ವಾಡ್ರನ್ ಲೀಡರ್ ಪ್ರಶಾಂತ್ ಸಿಂಗ್, ಫ್ಲಿಂಟ್ ಲೆಫ್ಟಿನೆಂಟ್ ಶುಭಂ ಕುಮಾರ್, ಸಾರ್ಜೆಂಟ್ ಜಿತೇಂದ್ರ ಶರ್ಮಾ, ಅಗ್ನಿವೀರ್ವಾಯು ಖೇಮರಾಮ್ ಕುಮಾವತ್ ಮತ್ತು ಅಗ್ನಿವೀರ್ವಾಯು ಡ್ಯಾನಿಶ್ ಅಲಂ ಎಂದು ಗುರುತಿಸಲಾಗಿದೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ತನಿಖಾ ತಂಡ ರಚಿಸಿ ಆದೇಶಿಸಲಾಗಿದೆ ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದ ಸ್ಥಳದಿಂದ ಬಂದ ಆರಂಭಿಕ ದೃಶ್ಯಗಳಲ್ಲಿ ಅಪಘಾತಕ್ಕೀಡಾದ ವಿಮಾನದ ಅವಶೇಷಗಳ ಸುತ್ತಲೂ ಐಎಎಫ್ ಸಿಬ್ಬಂದಿ ಇರುವುದನ್ನು ತೋರಿಸಲಾಗಿದೆ. ವಿಮಾನವು ಎರಡು ಭಾಗಗಳಾಗಿ ಮುರಿದುಹೋಗಿರುವುದನ್ನು ಮತ್ತು ವಿಮಾನದ ಮುಂಭಾಗದಿಂದ ಇನ್ನೂ ಹೊಗೆ ಹೊರಬರುತ್ತಿರುವುದನ್ನು ದೃಶ್ಯಗಳು ತೋರಿಸುತ್ತವೆ. ಅಪಘಾತ ಸ್ಥಳದಲ್ಲಿ ಅಗ್ನಿಶಾಮಕ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಐಎಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆ ಸಂಭವಿಸಿದಾಗ ಎಎನ್ -32 ವಿಮಾನವು ಜೋರ್ಹತ್‌ನ ರೌರಿಯಾ ಪ್ರದೇಶದಲ್ಲಿರುವ ಐಎಎಫ್ ವಾಯುನೆಲೆಯಲ್ಲಿ ಇಳಿಯುತ್ತಿತ್ತು ಎಂದು ರಕ್ಷಣಾ ವಕ್ತಾರರು ಈ ಮೊದಲು ಮಾಹಿತಿ ನೀಡಿದ್ದರು. ಘಟನೆ ಸಂಭವಿಸಿದಾಗ AN-32 ವಿಮಾನವು ರೌರಿಯಾ ಪ್ರದೇಶದಲ್ಲಿರುವ IAF ನ ವಾಯುನೆಲೆಯಲ್ಲಿ ಲ್ಯಾಂಡಿಂಗ್ ಆಗುತ್ತಿತ್ತು ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ. "ಹಿರಿಯ ಐಎಎಫ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ಸಾವುನೋವುಗಳ ಬಗ್ಗೆ ಇನ್ನೂ ಮಾಹಿತಿ ಲಭ್ಯವಿಲ್ಲ" ಎಂದು ಈ ಮೊದಲು ವಕ್ತಾರರು ತಿಳಿಸಿದ್ದರು. ಆದರೆ ಈಗ ಐವರು ಮೃತಪಟ್ಟಿದ್ಧಾರೆ ಎಂದು ದೃಢಪಟ್ಟಿದೆ.

ವಿಮಾನ ಪತನದ ಕಾರಣ ಪತ್ತೆಗೆ ತಂಡ ರಚಿಸಿ ತನಿಖೆ ಆದೇಶಿಸಲಾಗಿದೆ ಎಂದು ಐಎಎಫ್ ತಿಳಿಸಿತ್ತು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!