ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿ ಖಾಸಗಿ ಕಾಲೇಜ್ ವಿದ್ಯಾರ್ಥಿನಿ ಕೊಕ್ಕಡದ ಮನೆಯಲ್ಲಿ ಆತ್ಮಹತ್ಯೆ:

ಬೆಳ್ತಂಗಡಿ ಖಾಸಗಿ ಕಾಲೇಜ್ ವಿದ್ಯಾರ್ಥಿನಿ ಕೊಕ್ಕಡದ ಮನೆಯಲ್ಲಿ ಆತ್ಮಹತ್ಯೆ:

 

 

ಬೆಳ್ತಂಗಡಿ:ಖಾಸಗಿ ಕಾಲೇಜೊಂದರ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ‌ ಕೊಕ್ಕಡ ಸಮೀಪ ಮಂಗಳವಾರ ಬೆಳಗ್ಗೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಬೆಳ್ತಂಗಡಿಯ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಶ್ವೇತಾ (17) ಎಂದು ಗುರುತಿಸಲಾಗಿದೆ. ಕೊಕ್ಕಡ ಬಳಿಯ ಹಳ್ಳಿಂಗೇರಿ ಎಂಬಲ್ಲಿ ವಾಸವಿದ್ದ ಮೂಲತಃ ಧಾರವಾಡದ ನಿವಾಸಿ ರಮೇಶ್ ಎಂಬವರ ಮಗಳು ಶ್ವೇತ ಎಂದಿನಂತೆ ಬೆಳಗ್ಗೆ ಕಾಲೇಜಿಗೆ ತೆರಳಲು ತಯಾರಿ ನಡೆಸುತಿದ್ದಳು. ತಂದೆ ಕೆಲಸಕ್ಕೆ ತೆರಳಿದ್ದು ತಾಯಿ ತನ್ನ ದಿನನಿತ್ಯದ ಕೆಲಸದಲ್ಲಿ ನಿರತರಾಗಿದ್ದರು. ಅದರೆ ಮಗಳು ಕಾಲೇಜಿಗೆ ತೆರಳಲು ಹೊತ್ತಾದರೂ ಮನೆಯಿಂದ ಹೊರಗೆ  ಬಾರಧೆ ಇದ್ದ ವೇಳೆ ತಾಯಿ ಮನೆಯೊಳಗೆ ಹೋಗಿ ನೋಡಿದಾಗ ಮನೆಗೆ ಶೀಟ್ ಅಳವಡಿಸಲು ಹಾಕಿದ್ದ ಕಬ್ಬಿಣದ ಕಂಬಿಗೆ ಬಟ್ಟೆಯಿಂದ ನೇಣು ಬಿಗಿದುಕೊಂಡ ರೀತಿಯಲ್ಲಿ ಪತ್ತೆಯಾಗಿದ್ದಾಳೆ , ಘಟನೆಗೆ ಕಾರಣ ತಿಳಿದು ಬಂದಿಲ್ಲ ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!