ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿ, ರಸ್ತೆ ಬಿಟ್ಟು ಪುಟ್ ಪಾತ್  ಏರಿದ ಕೆಎಸ್ಆರ್ ಟಿ ಸಿ ಬಸ್: ರಸ್ತೆ ಬದಿಯ ಕಬ್ಬಿಣದ ಗಾರ್ಡ್ ಪುಡಿ ಪುಡಿ, ಅದೃಷ್ಟವಶಾತ್ ತಪ್ಪಿದ ದೊಡ್ಡ ದುರಂತ:

ಬೆಳ್ತಂಗಡಿ, ರಸ್ತೆ ಬಿಟ್ಟು ಪುಟ್ ಪಾತ್  ಏರಿದ ಕೆಎಸ್ಆರ್ ಟಿ ಸಿ ಬಸ್: ರಸ್ತೆ ಬದಿಯ ಕಬ್ಬಿಣದ ಗಾರ್ಡ್ ಪುಡಿ ಪುಡಿ, ಅದೃಷ್ಟವಶಾತ್ ತಪ್ಪಿದ ದೊಡ್ಡ ದುರಂತ:

 

 

ಬೆಳ್ತಂಗಡಿ: ಕೆ ಎಸ್ ಆರ್ ಟಿ ಸಿ ಬಸ್ಸೊಂದು ಹೆದ್ದಾರಿ ಬದಿಯ ಪುಟ್ ಪಾತ್ ಮೇಲೆ ಹತ್ತಿದ್ದು, ಕಬ್ಬಿಣದ ಗಾರ್ಡ್ ಗಳು ಪುಡಿ ಪುಡಿಯಾದ ಘಟನೆ ಹಳೇ ಪೇಟೆ ವಾಣಿ ಶಾಲೆ ಬಳಿಯ ಹೆದ್ದಾರಿಯಲ್ಲಿ ಮಧ್ಯಾಹ್ನ ನಡೆದಿದೆ. ಗುರುವಾಯನಕೆರೆಯಿಂದ ಕೆ ಎಸ್ ಆರ್ ಟಿ ಸಿ ಬಸ್ಸೊಂದು ಅತೀ ವೇಗವಾಗಿ ಬಂದ್ದು ಚಾಲಕನ ನಿಯಂತ್ರಣ ತಪ್ಪಿ ಪುಟ್ ಪಾತ್ ನ ಕಬ್ಬಿಣದ ಗಾರ್ಡ್ ಸೇರಿದಂತೆ ಬೀದಿ ದೀಪಗಳ ಕಂಬಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಬ್ಬಿಣದ ಗಾರ್ಡ್ ಗಳು‌ ಪುಡಿ ಪುಡಿಯಾಗಿದೆ. ಒಂದು ವೇಳೆ ಶಾಲೆ ಬಿಡುವ ಸಮಯದಲ್ಲಿ ಈ ರೀತಿಯ ಘಟನೆ ಸಂಭವಿಸುತಿದ್ದರೆ ದೊಡ್ಡ ಅನಾಹುತ ಸಂಭವಿಸುತಿತ್ತು ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!