ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಶಿವಮೊಗ್ಗ ಕ್ರೇನ್ ಚಕ್ರದಡಿ ಸಿಲುಕಿ ಪಿಲಿಗೂಡಿನ  ವ್ಯಕ್ತಿ ಸ್ಥಳದಲ್ಲೇ ಸಾವು:

ಶಿವಮೊಗ್ಗ ಕ್ರೇನ್ ಚಕ್ರದಡಿ ಸಿಲುಕಿ ಪಿಲಿಗೂಡಿನ  ವ್ಯಕ್ತಿ ಸ್ಥಳದಲ್ಲೇ ಸಾವು:

 

 

 

ಬೆಳ್ತಂಗಡಿ : ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ನಗರದ ಹೊಸಮನೆ ದಿಡ್ಡಮ್ಮ ದೇವಸ್ಥಾನದ ಗೋಪುರ ಕೆಲಸದ ವೇಳೆ ಕ್ರೇನ್‌ಗೆ ಚಕ್ರಕ್ಕೆ ಸಿಲುಕಿ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ದುರ್ಘಟನೆ ಜೂ.6ರಂದು ಸಂಜೆ ನಡೆದಿದೆ. ಮೃತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪಿಲಿಗೂಡು ನಿವಾಸಿ ನಾಗೇಶ್ (48) ಎಂದು ಗುರುತಿಸಲಾಗಿದೆ. ನಾಗೇಶ್  ಅವರು ಶಿವಮೊಗ್ಗದ ದೇವಸ್ಥಾನದ ಗೋಪುರದ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸಲು ಜೂ.5 ರಂದು ಶುಕ್ರವಾರ ಶಿವಮೊಗ್ಗಕ್ಕೆ ತೆರಳಿದ್ದರು.ದೇವಾಲಯದ ಕೆಲಸದ ವೇಳೆ ಕಲ್ಲನ್ನು ತೆಗೆದುಕೊಂಡು ರಿವರ್ಸ್ ಹೋಗುವ ವೇಳೆ ಎಡವಿ ಬಿದ್ದು ಕ್ರೇನ್‌ಗೆ ಚಕ್ರದಡಿ ಸಿಲುಕಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತ್ನಿ ಕವಿತಾ ಹಾಗೂ ಓರ್ವ ಪುತ್ರಿ,ಓರ್ವ ಪುತ್ರ ಹಾಗೂ ಬಂಧು ಬಳಗವನ್ನು ಆಗಲಿದ್ದಾರೆ. ಕ್ರೇನ್ ಚಾಲಕನ ಅಜಾಗರೂಕತೆಯಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.ಘಟನೆಯ ಬಗ್ಗೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!