ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಶ್ರಮಿಕ ಸೇವಾ ಟ್ರಸ್ಟ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ:

ಶ್ರಮಿಕ ಸೇವಾ ಟ್ರಸ್ಟ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ:

 

 

 

 

ಬೆಳ್ತಂಗಡಿ:ಶ್ರಮಿಕ ಸೇವಾ ಟ್ರಸ್ಟ್ ವತಿಯಿಂದ ಶಾಸಕ ಹರೀಶ್ ಪೂಂಜರವರ ನೇತೃತ್ವದಲ್ಲಿ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಸಾರ್ವಜನಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ (ಡಿಸ್ಟ್ರಿಂಕ್ಷನ್) ಉತ್ತೀರ್ಣರಾದ ಬೆಳ್ತಂಗಡಿ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುವ "ಶ್ರಮಿಕ ಪ್ರತಿಭಾ ವಿದ್ಯಾರ್ಥಿ" ಸನ್ಮಾನ ಕಾರ್ಯಕ್ರಮವನ್ನು ಜೂನ್ 28, ಭಾನುವಾರ ಮೂರು ಕೇಂದ್ರಗಳಲ್ಲಿ ಆಯೋಜಿಸಲಾಗಿದೆ. 1. ಪೂರ್ವಾಹ್ನ: 9.00 - ಸ್ವರಾಜ್ ಟವರ್ಸ್ ಸಭಾಭವನ ಅಳದಂಗಡಿ (ಅಳದಂಗಡಿ ಮತ್ತು ನಾರಾವಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ - ಗ್ರಾಮಗಳು: ಬಡಗಕಾರಂದೂರು, ಪಿಲ್ಯ, ಸುಲ್ಕೇರಿಮೊಗ್ರು, ಸುಲ್ಕೇರಿ, ನಾವರ, ಕುದ್ಯಾಡಿ, ಬಳೆಂಜ, ನಾಲ್ಕೂರು, ತೆಂಕಕಾರಂದೂರು, ಗರ್ಡಾಡಿ, ಪಡಂಗಡಿ, ಕುಕ್ಕೇಡಿ, ನಿಟ್ಟಡೆ, ಮೇಲಂತಬೆಟ್ಟು, ಸವಣಾಲು, ಮುಂಡೂರು, ಶಿರ್ಲಾಲು, ಕರಂಬಾರು, ನಾರಾವಿ, ಕುತ್ಲೂರು, ಸಾವ್ಯ, ಅಂಡಿಂಜೆ, ಕೊಕ್ರಾಡಿ, ಕಾಶಿಪಟ್ನ, ಮರೋಡಿ, ಪೆರಾಡಿ, ಹೊಸಂಗಡಿ, ಬಡಕೋಡಿ, ಆರಂಬೋಡಿ, ಗುಂಡೂರಿ, ಬಜಿರೆ, ಕರಿಮಣೇಲು, ಮೂಡುಕೋಡಿ, ವೇಣೂರು)

2. ಪೂರ್ವಾಹ್ನ: 11.30 - ಸಂಗಮ ಸಭಾಭವನ, ಲಾಯಿಲ (ಕಣಿಯೂರು, ಕುವೆಟ್ಟು ಹಾಗೂ ಬೆಳ್ತಂಗಡಿ ನಗರ ಮಹಾಶಕ್ತಿಕೇಂದ್ರ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ - ಗ್ರಾಮಗಳು: ತಣ್ಣೀರುಪಂಥ, ಬಾರ್ಯ, ಕರಾಯ, ತೆಕ್ಕಾರು, ಪುತ್ತಿಲ, ಬಂದಾರು, ಉರುವಾಲು, ಕಣಿಯೂರು, ಮೊಗ್ರು, ಇಳಂತಿಲ, ಕಳಿಯ, ನ್ಯಾಯತರ್ಪು, ಮಚ್ಚಿನ, ಪಾರೆಂಕಿ, ಕುಕ್ಕಳ, ಓಡಿಲ್ನಾಳ, ಸೋಣಂದೂರು, ಮಾಲಾಡಿ, ಕುವೆಟ್ಟು, ಕೊಯ್ಯೂರು, ಬೆಳ್ತಂಗಡಿ ನಗರ)

3. ಅಪರಾಹ್ನ: 2.00 - ಅನುಗ್ರಹ ಚರ್ಚ್ ಸಭಾಭವನ ಉಜಿರೆ (ಉಜಿರೆ, ಲಾಯಿಲ ಹಾಗೂ ಧರ್ಮಸ್ಥಳದ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ - ಗ್ರಾಮಗಳು: ಲಾಯಿಲ, ನಡ, ಕನ್ಯಾಡಿ, ನಾವೂರು, ಇಂದಬೆಟ್ಟು, ಮಿತ್ತಬಾಗಿಲು, ಮಲವಂತಿಗೆ, ಕಡಿರುದ್ಯಾವರ, ಮುಂಡಾಜೆ, ಚಾರ್ಮಾಡಿ, ಚಿಬಿದ್ರೆ, ತೋಟತ್ತಾಡಿ, ನೆರಿಯ, ಪುದುವೆಟ್ಟು, ಕಲ್ಮಂಜ, ಉಜಿರೆ, ಬೆಳಾಲು, ಧರ್ಮಸ್ಥಳ, ಪಟ್ರಮೆ, ಕಳೆಂಜ, ನಿಡ್ಲೆ, ಶಿಬಾಜೆ, ಶಿಶಿಲ, ರೆಖ್ಯಾ, ಹತ್ಯಡ್ಕ, ಕೊಕ್ಕಡ)

ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಈ ಸಾಲಿನ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಂಬಂಧಿಸಿದ ವ್ಯಾಪ್ತಿಯ ಎಲ್ಲಾ ಡಿಸ್ಟ್ರಿಂಕ್ಷನ್ ಪಡೆದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಟ್ರಸ್ಟ್‌ನ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!