ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿಯ ತತ್ವ ಸಿದ್ಧಾಂತಗಳನ್ನು ಒಪ್ಪಿ, ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ಆಡಳಿತ ವೈಖರಿ ಹಾಗೂ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮರೋಡಿ ಗ್ರಾಮದ ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡರು.
ಮರೋಡಿ ಗ್ರಾಮದ ಕಾಂಗ್ರೆಸ್ ಮುಖಂಡರಾದ ವಿಶು ಕುಮಾರ್ ಜೈನ್, ಜಯಪ್ರಕಾಶ್ ಪಾಂಡಿ, ಸಂತೋಷ್ ಕಲ್ಪನೆ, ಯೋಗೇಂದ್ರ ಆಚಾರ್ಯ, ಪ್ರವೀಣ್ ಬಲ್ಲಾಳ, ಶಿವಪ್ರಸಾದ್ ಕಲ್ಪನೆ, ರಮೇಶ್ ಸಾಲಿಯಾನ್ ಬನತ್ಯರಡ್ಡ, ಬಾಲಕೃಷ್ಣ ಪಾದೆ, ನಿತೇಶ್ ಕಲ್ಡೆ ಹಾಗೂ ದೀಕ್ಷಿತ್ ಶೆಟ್ಟಿ ಅವರು ಶಾಸಕರಾದ ಹರೀಶ್ ಪೂಂಜ, ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷರಾದ ಶ್ರೀನಿವಾಸ್ ರಾವ್ ಹಾಗೂ ಮಂಗಳೂರು ವಿಭಾಗ ಸಹಪ್ರಭಾರಿ ಜಯಂತ್ ಕೋಟ್ಯಾನ್ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಜಯಾನಂದ ಗೌಡ, ಪ್ರಶಾಂತ್ ಎಂ. ಪಾರೆಂಕಿ, ಜಿಲ್ಲಾ ಮನ್ ಕಿ ಬಾತ್ ಪ್ರಮುಖ್ ಸೀತಾರಾಮ್ ಬೆಳಾಲು, ಬಿಜೆಪಿ ಮುಖಂಡರಾದ ಸದಾನಂದ ಉಂಗಿಲಬೈಲು, ಮೋಹನ್ ಅಂಡಿಂಜೆ, ರತ್ನಾಕರ್ ಬುಣ್ಣನ್, ಪದ್ಮಶ್ರೀ ಜೈನ್, ರಾಜೇಶ್ ಮೂಡುಕೋಡಿ, ಮಾಜಿ ಪಂಚಾಯತ್ ಸದಸ್ಯರು, ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಮರೋಡಿ ಗ್ರಾಮದ ಕಾಂಗ್ರೆಸ್ ಮುಖಂಡರ ಬಿಜೆಪಿ ಸೇರ್ಪಡೆಯಿಂದ ಬೆಳ್ತಂಗಡಿ ಕ್ಷೇತ್ರದಲ್ಲಿ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.





