Home › ಹುಟ್ಟುಹಬ್ಬ ಹಿನ್ನೆಲೆ, ಧರ್ಮಸ್ಥಳಕ್ಕೆ ಸಚಿವ ಸುರೇಶ್ ಕುಮಾರ್: 'ಜ್ಞಾನ ತಾಣ'ಕ್ಕೆ ಮೆಚ್ಚುಗೆ
ಹುಟ್ಟುಹಬ್ಬ ಹಿನ್ನೆಲೆ, ಧರ್ಮಸ್ಥಳಕ್ಕೆ ಸಚಿವ ಸುರೇಶ್ ಕುಮಾರ್: 'ಜ್ಞಾನ ತಾಣ'ಕ್ಕೆ ಮೆಚ್ಚುಗೆ
ONLINE PUDU / Wednesday, November 11, 2020
ಧರ್ಮಸ್ಥಳ: ಶಿಕ್ಷಣ ಕ್ಷೇತ್ರದಲ್ಲಿನ ಹಲವು ಸವಾಲುಗಳನ್ನು ಚರ್ಚಿಸುವ ಕುರಿತು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಜಾರಿಗೊಳಿಸಲಾದ 'ಜ್ಞಾನ ತಾಣ' ಕುರಿತು ಡಾ.ಹೆಗ್ಗಡೆಯವರ ಜೊತೆ ಚರ್ಚೆ ಸಮಾಲೋಚನೆ ನಡೆಸಲಾಯಿತು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಅವರು ತಮ್ಮ ಹುಟ್ಟು ಹಬ್ಬದ ಹಿನ್ನೆಲೆ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದು, ಬಳಿಕ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಜೊತೆ ಚರ್ಚೆ ನಡೆಸಿದ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಸ್ತೃತವಾಗಿ ಬರೆದಿದ್ದಾರೆ.
ಧರ್ಮಸ್ಥಳ ಕ್ಷೇತ್ರದಿಂದ ಸುಮಾರು ₹ 21 ಕೋಟಿ ವೆಚ್ಚದಲ್ಲಿವಿತರಣೆ ಮಾಡಲಾಗುತ್ತಿರುವ ಲ್ಯಾಪ್-ಟ್ಯಾಪ್ ಮತ್ತು ಟ್ಯಾಬ್ ಗಳ ವ್ಯವಸ್ಥೆ ಮಾಡಿರುವ ಕಾರ್ಯ ಶ್ಲಾಘನೀಯ. ಧರ್ಮಸ್ಥಳ ಕ್ಷೇತ್ರದಿಂದ ನಡೆಯುತ್ತಿರುವ ಗ್ರಾಮೀಣಾಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲಾಯಿತು ಎಂದಿದ್ದಾರೆ.

ಶಾಲೆಗಳನ್ನು ತೆರೆಯಬೇಕೋ ಅಥವಾ ಬೇಡವೋ ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ. ಆನ್ ಲೈನ್ ಶಿಕ್ಷಣದಲ್ಲೂ ಹಲವಾರು ಇತಿಮಿತಿಗಳಿವೆ. ಎಸ್.ಎಸ್.ಎಲ್.ಸಿ. ಪರೀಕ್ಷೆ ಸುಸೂತ್ರವಾಗಿ ನಡೆದ ಹಿನ್ನೆಲೆ ಹಾಗೂ ಈ ಬಾರಿ ವಿಶೇಷ ಸನ್ನಿವೇಶದಲ್ಲಿ ಜರುಗಿದ್ದ ಎಸ್ಎಸ್ಎಲ್ ಸಿ ಪರೀಕ್ಷೆಗಳು ನಡೆಯುವುದಕ್ಕಿಂತ ಮುನ್ನ ಧರ್ಮಸ್ಥಳಕ್ಕೆ ಆಗಮಿಸಿ ಭಗವಂತನ ಕೃಪೆ, ಆಶೀರ್ವಾದ ಪಡೆದಿದ್ದೆ. ಪರೀಕ್ಷೆ ಮುಗಿದ ತಕ್ಷಣ ಬಂದು ನನ್ನ ಧನ್ಯವಾದಗಳನ್ನು ಸಮರ್ಪಿಸಿದ್ದೆ ಎಂದು ಧರ್ಮಸ್ಥಳ ಭೇಟಿ ಕುರಿತು ತಿಳಿಸಿದರು.