ಶಿಶಿಲ ಗ್ರಾಮದ ಕಾರೆಗುಡ್ಡೆ ನಿವಾಸಿ ಸುರೇಶ ಕೆ. (32 ವ.) ಎಂಬವರು ಮೃತಪಟ್ಟವರು. ಅವರು ಗುರುವಾರ ಸಂಜೆ 4.30ರ ಸುಮಾರಿಗೆ ಶಿಶಿಲ ಸೇತುವೆ ಎಂಬಲ್ಲಿಗೆ ಸ್ನಾನ ಮಾಡಲು ತೆರಳಿದ್ದವರು, ತಡರಾತ್ರಿವರೆಗೂ ವಾಪಾಸ್ ಬಾರದೇ ಇದ್ದುದ್ದರಿಂದ ಹುಡುಕಾಡಿದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೂರ್ಚೆ ರೋಗ ಇದ್ದು, ಸ್ನಾನ ಮಾಡುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಶಂಕೆ ಇದೆ. ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
Home › ಶಿಶಿಲ: ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು