ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › 'ಯಕ್ಷಗಾನದಲ್ಲೂ ಕೇಳಿಬರುತ್ತಿದೆ ನೀ ತಾಂಟ್ರೆ ಬಾ ತಾಂಟ್

'ಯಕ್ಷಗಾನದಲ್ಲೂ ಕೇಳಿಬರುತ್ತಿದೆ ನೀ ತಾಂಟ್ರೆ ಬಾ ತಾಂಟ್

[embedyt] https://www.youtube.com/watch?v=Q4x49lWm6pc[/embedyt]

 

ಬೆಳ್ತಂಗಡಿ: ಕರಾವಳಿಯಲ್ಲಿ‌ ಈಗ ಯಾರ ವಾಟ್ಸ್ಆ್ಯಪ್ ಸ್ಟೇಟಸ್ ನೋಡಿದರೂ 'ನೀ ತಾಂಟ್ರೆ ಬಾ ತಾಂಟ್'(ನೀನು ತಾಗುತ್ತೀಯ ಬಾ ತಾಗು) ಎಂಬ ಟ್ರೋಲ್ ವಿಡಿಯೋ ಕಂಡು ಬರುತ್ತಿದೆ. ಅದೀಗ ಮತ್ತೂ ಮುಂದುವರಿದು ಯಕ್ಷಗಾನದಲ್ಲಿಯೂ ಹಾಸ್ಯ ರೂಪವಾಗಿ ಮೂಡಿ ಬಂದಿದೆ.

ಕರಾವಳಿಯಲ್ಲಿ ಸಖತ್ ಟ್ರೋಲ್ ಆಗುತ್ತಿದೆ 'ನೀ ತಾಂಟ್ರೆ ಬಾ ತಾಂಟ್' ಬಪ್ಪನಾಡು ಮೇಳದ ಖ್ಯಾತ ಹಾಸ್ಯಗಾರ ದಿನೇಶ್ ಕೋಡಪದವು ಪ್ರಸ್ತುತ ನಡೆಯುವ ವಿಚಾರಗಳನ್ನು ಯಕ್ಷಗಾನದಲ್ಲಿ ಹಾಸ್ಯರೂಪವಾಗಿ ತರುವುದರಲ್ಲಿ ಭಾರೀ ನಿಷ್ಣಾತರು. ಇದೀಗ ಅವರು ಪ್ರಸ್ತುತ 'ನೀ ತಾಂಟ್ರೆ ಬಾ ತಾಂಟ್' ಎಂಬ ಟ್ರೋಲ್ ಆಗಿರುವುದನ್ನು ಪ್ರೇಕ್ಷಕರಿಗೆ ಮನೋರಂಜನೆ ನೀಡುವ ಉದ್ದೇಶದಿಂದ ಯಥಾವತ್ತಾಗಿ ಯಕ್ಷಗಾನದಲ್ಲಿ ಹಾಸ್ಯರೂಪವಾಗಿ ತಂದಿದ್ದಾರೆ. ಇದನ್ನು ಯಾರೋ ವಿಡಿಯೋ ಮಾಡಿದ್ದಾರೆ‌. ಅದೀಗ ಸಖತ್ ವೈರಲ್ ಆಗುತ್ತಿದ್ದು, ಎಲ್ಲರ ವಾಟ್ಸ್ಆ್ಯಪ್ ಸ್ಟೇಟಸ್ ಗಳಲ್ಲಿಯೂ ರಾರಾಜಿಸುತ್ತಿದೆ. ಎಸ್ ಡಿಪಿಐ ಮುಖಂಡ ರಿಯಾಜ್​ ಪರಂಗಿಪೇಟೆಯವರು ಇತ್ತೀಚೆಗೆ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಾ, "ನಳಿನ್ ಕುಮಾರ್ ಕಟೀಲು ಆಗಿರಬಹುದು, ಸಿ.ಟಿ.ರವಿಯಾಗಿರಬಹುದು, ಬೆಳ್ತಂಗಡಿಯ ಹರೀಶ್ ಪೂಂಜಾ ಆಗಿರಬಹುದು ನೀವು ನಮ್ಮೊಂದಿಗೆ ಸೆಣಸಾಟಕ್ಕೆ ಬರುವುದಾದರೆ ನಮಗೆ ನಿಮ್ಮೊಂದಿಗೆ‌ ಹೇಳಲಿಕ್ಕೆ ಇರುವುದು 'ನೀ ತಾಂಟ್ರೆ ಬಾ ತಾಂಟ್' ನಿಮ್ಮನ್ನು ಎದುರಿಸಲು‌ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ತಯಾರಾಗಿದೆ" ಎಂದು ಹೇಳಿದ್ದರು.ಆ ಬಳಿಕ 'ನೀ ತಾಂಟ್ರೆ ಬಾ ತಾಂಟ್' ವಾಕ್ಯ ಸಾಕಷ್ಟು ವಿಭಿನ್ನ ರೂಪದಲ್ಲಿ ಟ್ರೋಲ್ ಆಗುತ್ತಿದ್ದು, ಇದೀಗ ಯಕ್ಷಗಾದೊಳಗೂ ಸೇರಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ. ಅಷ್ಟೇ ಅಲ್ಲದೆ ಅದರ ವಿಡಿಯೋ ಕೂಡಾ ಸಾಕಷ್ಟು ವೈರಲ್ ಆಗುತ್ತಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!