ಅವರು ಬುಧವಾರ ಉಜಿರೆಯಲ್ಲಿ 155ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ವ್ಯಸನಮುಕ್ತರಿಗೆ ಹಿತವಚನ ನೀಡಿದರು.
ದುಶ್ಚಟಗಳು ವ್ಯಕ್ತಿಯ ಸ್ವಭಾವ, ಸಂಕಲ್ಪ ಶಕ್ತಿ ಮತ್ತು ವ್ಯಕ್ತಿತ್ವಕ್ಕೆ ಹಾನಿ ಮಾಡುವುದರಿಂದ ವ್ಯಸನಮುಕ್ತರಾಗಿ ಶಾಂತಿ, ನೆಮ್ಮದಿಯ ಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್, ನಿರ್ದೇಶಕ ವಿವೇಕ್ ಪಾಯ್ಸ್ ಶುಭಾಶಂಸನೆ ಮಾಡಿದರು.
ರಾಜ್ಯದ 26 ಜಿಲ್ಲೆಗಳಿಂದ 58 ಶಿಬಿರಾರ್ಥಿಗಳು ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ವ್ಯಸನಮುಕ್ತರಾದರು.
ಮುಂದಿನ ವಿಶೇಷ ಮದ್ಯವರ್ಜನ ಶಿಬಿರ ಉಜಿರೆಯಲ್ಲಿ ಫೆ.1 ರಿಂದ ಪ್ರಾರಂಭವಾಗಲಿದೆ.