ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮುಂಡಾಜೆ ರಸ್ತೆ ಬದಿ 6 ಮಂಗಗಳ ಮೃತ ದೇಹ ಪತ್ತೆ 

ಮುಂಡಾಜೆ ರಸ್ತೆ ಬದಿ 6 ಮಂಗಗಳ ಮೃತ ದೇಹ ಪತ್ತೆ 

ಬೆಳ್ತಂಗಡಿ : ಮುಂಡಾಜೆ ಗ್ರಾಮದ ಕಾಯರ್ತೋಡಿ ರಸ್ತೆಯ ಸೀಟ್ ಬಳಿ ರಕ್ಷಿತಾರಣ್ಯ ಪ್ರದೇಶದಲ್ಲಿ ರಸ್ತೆ ಬದಿ 6 ಮಂಗಗಳ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಈಗಾಗಲೇ ಹಲವು ಕಡೆಗಳಲ್ಲಿ ಮಂಗನ ಕಾಯಿಲೆಯ ಅತಂಕ ಇರುವುದರಿಂದ ಈ ರೀತಿ ರಸ್ತೆ ಬದಿ ಮೃತ ದೇಹಗಳು ಪತ್ತೆಯಾಗಿರುವುದರಿಂದ ಜನರು ಗಾಬರಿಗೊಳ್ಳುವಂತಾಗಿದೆ. ಅದಲ್ಲದೆ ರಸ್ತೆಯ ಬದಿಯಲ್ಲಿ ಏನಾದರೂ ವಿಷ ಪದಾರ್ಥ ಅಥವಾ ಯಾರಾದರೂ ವಿಷವಿಕ್ಕಿದ್ದಾರೆಯೇ ಅಥವಾ ಇನ್ನೇನಾದರೂ ಆಗಿದೆಯೇ ಎಂಬುವುದು ತನಿಖೆಯಿಂದ ತಿಳಿದು ಬರಬೇಕಾಗಿದೆ.

ಈಗಾಗಲೇ ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಹಾಗೂ ಪಂಚಾಯಿತಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.ಅಧಿಕಾರಿಗಳು ಬಂದ ನಂತರವೇ ಹೆಚ್ಚಿನ ಮಾಹಿತಿ ತಿಳಿಯಬೇಕಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!