Home › ಮದ್ದಡ್ಕ ಗಾಳಿಗೆ ಮರದ ಕೊಂಬೆ ರಸ್ತೆಗೆ ಮುರಿದು ಬಿದ್ದು ವಾಹನ ಸಂಚಾರಕ್ಕೆ ಅಡಚಣೆ: ತಕ್ಷಣ ಸ್ಪಂದಿಸಿದ ಸ್ಥಳೀಯರು
ಮದ್ದಡ್ಕ ಗಾಳಿಗೆ ಮರದ ಕೊಂಬೆ ರಸ್ತೆಗೆ ಮುರಿದು ಬಿದ್ದು ವಾಹನ ಸಂಚಾರಕ್ಕೆ ಅಡಚಣೆ: ತಕ್ಷಣ ಸ್ಪಂದಿಸಿದ ಸ್ಥಳೀಯರು
ONLINE PUDU / Monday, March 29, 2021
ಮದ್ದಡ್ಕ : ಭಾರೀ ಗಾಳಿಗೆ ಮರದ ಕೊಂಬೆಯೊಂದು ಮಾರ್ಗಕ್ಕೆ ಮುರಿದು ಬಿದ್ದ ಘಟನೆ ಮದ್ದಡ್ಕದಲ್ಲಿ ನಡೆದಿದೆ.
ಮದ್ದಡ್ಕ ಸಮೀಪ ಕುವೆಟ್ಟು ಶಾಲೆಯ ಹತ್ತಿರ ಇಂದು ರಾತ್ರಿ ಬೀಸಿದ ಭಾರೀ ಗಾಳಿಗೆ ರಸ್ತೆ ಬದಿಯಲ್ಲಿದ್ದ ಮರದ ದೊಡ್ಡ ಕೊಂಬೆಯೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಈ ಬಗ್ಗೆ ಮಾಹಿತಿ ಪಡೆದ ಮದ್ದಡ್ಕ ಹೆಲ್ಪ್ ಲೈನ್ ಸದಸ್ಯರು ಹಾಗೂ ಸ್ಥಳೀಯರು ಸೇರಿ ಮರದ ಕೊಂಬೆಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಕೊಟ್ಟರು.