ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ತೋಟತ್ತಾಡಿ ರಿಕ್ಷಾ ಚಾಲಕನ ಮೃತದೇಹ ಸಂಶಯಾಸ್ಪದ ರೀತಿಯಲ್ಲಿ ಪತ್ತೆ 

ತೋಟತ್ತಾಡಿ ರಿಕ್ಷಾ ಚಾಲಕನ ಮೃತದೇಹ ಸಂಶಯಾಸ್ಪದ ರೀತಿಯಲ್ಲಿ ಪತ್ತೆ 

ಬೆಳ್ತಂಗಡಿ: ತೋಟತ್ತಾಡಿ ಸಮೀಪದ ಪಿತ್ತಿಲು ಎಂಬಲ್ಲಿ ಅಟೋ ಚಾಲಕನ ಶವ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ತೋಟತ್ತಾಡಿ ಗ್ರಾಮದ ಅರ್ಬಿ ಮನೆ ನಿವಾಸಿ ಗಂಗಯ್ಯ ಗೌಡ(58).

ನಿನ್ನೆ ರಾತ್ರಿಯಿಂದ ತನ್ನ ರಿಕ್ಷಾದೊಂದಿಗೆ ನಾಪತ್ತೆಯಾಗಿದ್ದರು. ಇಂದು ಬೆಳಗ್ಗಿನ ಜಾವ ತೋಟತ್ತಾಡಿಯ ಪಿತ್ತಿಲು ಸಮೀಪ ರಿಕ್ಷಾ ಪತ್ತೆಯಾಗಿತ್ತು.

ಹುಡುಕಾಟ ನಡೆಸಿದಾಗ ರಿಕ್ಷಾ ದಿಂದ ಸುಮಾರು 250 ಮೀ ದೂರದಲ್ಲಿ ಅರೆನಗ್ನ ಸ್ಥಿತಿಯಲ್ಲಿ  ನೆಲದ ಮೇಲೆ ಲುಂಗಿಯನ್ನು ಹಾಸಿ ಅದರ ಮೇಲೆ ಮಲಗಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇವರು ಕಕ್ಕಿಂಜೆ ಪಾರ್ಕಿಂಗ್‌ನಲ್ಲಿ ತನ್ನ ಸ್ವಂತ ರಿಕ್ಷಾದಲ್ಲಿ ದುಡಿಯುತಿದ್ದರು.

ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದುಬರಬೇಕಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!