Home › ಡಿಸೆಂಬರ್ ತನಕ ಇಲ್ಲ ಜಿಲ್ಲಾ ಮತ್ತು ತಾ.ಪಂಚಾಯತ್ ಚುನಾವಣೆ : ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆ
ಡಿಸೆಂಬರ್ ತನಕ ಇಲ್ಲ ಜಿಲ್ಲಾ ಮತ್ತು ತಾ.ಪಂಚಾಯತ್ ಚುನಾವಣೆ : ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆ
ONLINE PUDU / Thursday, July 15, 2021
ಬೆಂಗಳೂರು: ಡಿಸೆಂಬರ್ ತನಕ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ಮಾಡದಿರಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೊರೊನಾ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಅವಧಿ ಫೆಬ್ರವರಿಗೆ ಅಂತ್ಯವಾಗಿತ್ತು. ಚುನಾವಣೆ ಸಂಬಂಧ ಆಕಾಂಕ್ಷಿಗಳು ಸಾಕಷ್ಟು ನಿರೀಕ್ಷೆ ಇಟ್ಟಿದ್ದರು. ಇದೀಗ ಡಿಸೆಂಬರ್ವರೆಗೆ ಚುನಾವಣೆ ಮುಂದೂಡಿದ್ದು ಆಕಾಂಕ್ಷಿಗಳಲ್ಲಿ ನಿರಾಸೆ ಮೂಡಿಸಿದೆ.