ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › CBSE ದ್ವಿತೀಯ ಪಿಯುಸಿ ತರಗತಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟ

CBSE ದ್ವಿತೀಯ ಪಿಯುಸಿ ತರಗತಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟ

ನವದೆಹಲಿ: ಬಹು ನಿರೀಕ್ಷಿತ ಸಿಬಿಎಸ್​ಇ ಫಲಿತಾಂಶ ಇಂದು ಮಧ್ಯಾಹ್ನ 2 ಗಂಟೆಗೆ ಪ್ರಕಟವಾಗಲಿದೆ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಹೇಳಿದೆ. ವಿದ್ಯಾರ್ಥಿಗಳು ಫಲಿತಾಂಶವನ್ನು ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ ಅಧಿಕೃತ ವೆಬ್​​ಸೈಟ್​​ ನಲ್ಲಿ ನೋಡಬಹುದಾಗಿದೆ.

ಸಿಬಿಎಸ್​ಇ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವನ್ನು ಈ ಹಿಂದೆಯೇ ಪ್ರಕಟಿಸಬೇಕಿತ್ತು. ಶಾಲೆಗಳ ಜೊತೆಗೆ ಮಂಡಳಿಯು ದತ್ತಾಂಶ ಒಟ್ಟು ಸೇರಿಸಲು ತಡವಾದ ಕಾರಣ ಮುಂದೂಡಲಾಗಿತ್ತು. ವಿದ್ಯಾರ್ಥಿಗಳಿಗೆ ಯಾವುದೇ ಅನ್ಯಾಯವಾಗದಂತೆ ಫಲಿತಾಂಶ ಪ್ರಕಟ ಮಾಡಲಾಗುವುದು ಎಂದು ಸಿಬಿಎಸ್‌ಇ ತಿಳಿಸಿತ್ತು.ಎಸ್​ಎಸ್​ಎಲ್​ಸಿ ಮತ್ತು ಪ್ರಥಮ ಪಿಯುಸಿಯಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ 12ನೇ ತರಗತಿಯ ಫಲಿತಾಂಶ ನೀಡಲಿದ್ದೇವೆ. ಯಾವುದೇ ಕಾರಣಕ್ಕೂ ಫಲಿತಾಂಶದಲ್ಲಿ ವ್ಯತ್ಯಾಸವಾಗಲ್ಲ.

ಈ ವರ್ಷ ಕೋವಿಡ್​​ ಕಾರಣದಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಾಗಲಿಲ್ಲ. ಆದರೆ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಕೋನದಿಂದ ಯಾರಿಗೂ ತೊಂದರೆ ಆಗದಂತೆ ನ್ಯಾಯಯುತವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ ಮಾಡುತ್ತಿದ್ದೇವೆ ಎಂದು ಸಿಬಿಎಸ್​ಇ ಮಂಡಳಿ ತಿಳಿಸಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!