ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೈಕಿನಲ್ಲಿ ಗಾಂಜಾ ಸಾಗಾಟ: ಬೆಳ್ತಂಗಡಿ ಪೊಲೀಸರಿಂದ ಇಬ್ಬರ ಬಂಧನ: 1.3 ಕೆ.ಜಿ. ಗಾಂಜಾ ವಶ

ಬೈಕಿನಲ್ಲಿ ಗಾಂಜಾ ಸಾಗಾಟ: ಬೆಳ್ತಂಗಡಿ ಪೊಲೀಸರಿಂದ ಇಬ್ಬರ ಬಂಧನ: 1.3 ಕೆ.ಜಿ. ಗಾಂಜಾ ವಶ

 

 

 

 

 

ಬೆಳ್ತಂಗಡಿ: ಬೈಕಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬೆಳ್ತಂಗಡಿ ಪೊಲೀಸರು  ಬಂಧಿಸಿದ ಘಟನೆ ಮದ್ದಡ್ಕ  ಬಳಿ ನಡೆದಿದೆ. ತಾಲೂಕಿನ ಕುವೆಟ್ಟು ಗ್ರಾಮದ  ಮದ್ದಡ್ಕ  ಸಬರ ಬೈಲು ಎಂಬಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ನಂದಕುಮಾರ್ ಎಂ.ಎಂ. ಹಾಗೂ ಸಿಬ್ಬಂದಿಗಳು ಸೆ. 17ರಂದು ಶುಕ್ರವಾರ ಸಂಜೆ ವಾಹನ ತಪಾಸಣೆ ನಡೆಸುತ್ತಿರುವ ಸಂದರ್ಭ, ಪುಂಜಾಲಕಟ್ಟೆಯಿಂದ ಗುರುವಾಯನಕೆರೆಗೆ ಬರುತ್ತಿದ್ದ ದ್ವಿಚಕ್ರ ವಾಹನವನ್ನು ನಿಲ್ಲಿಸಿ ತಪಾಸಣೆ  ಮಾಡುವ ವೇಳೆ ಬೈಕಿನಲ್ಲಿ ಗಾಂಜಾ ಪತ್ತೆಯಾಗಿದೆ. ತಕ್ಷಣ ಆರೋಪಿಗಳಾದ ಮಹಮ್ಮದ್ ರಫೀಕ್ ಮತ್ತು ನೌಪಾಲ್ ಎಂಬವರನ್ನು ವಶಕ್ಕೆ ಪಡೆದು ಸುಮಾರು 45,850 ರೂ. ಮೌಲ್ಯದ 1.310 ಕೆ.ಜಿ. ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!