ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಉಡುಪಿಯಲ್ಲಿ ಪತ್ತೆಯಾದ ಮಡಂತ್ಯಾರು ಕಾಲೇಜಿನ‌ ವಿದ್ಯಾರ್ಥಿ: ಫೆ.21ರಂದು ನಾಪತ್ತೆಯಾಗಿದ್ದ ಬೆಳಾಲು ನಿವಾಸಿ ಪ್ರಥಮ್ ಪತ್ತೆ: ಸುಖಾಂತ್ಯ ಕಂಡ ಬಾಲಕನ ನಾಪತ್ತೆ ಪ್ರಕರಣ

ಉಡುಪಿಯಲ್ಲಿ ಪತ್ತೆಯಾದ ಮಡಂತ್ಯಾರು ಕಾಲೇಜಿನ‌ ವಿದ್ಯಾರ್ಥಿ: ಫೆ.21ರಂದು ನಾಪತ್ತೆಯಾಗಿದ್ದ ಬೆಳಾಲು ನಿವಾಸಿ ಪ್ರಥಮ್ ಪತ್ತೆ: ಸುಖಾಂತ್ಯ ಕಂಡ ಬಾಲಕನ ನಾಪತ್ತೆ ಪ್ರಕರಣ

 

 

 

ಬೆಳ್ತಂಗಡಿ: ಮಡಂತ್ಯಾರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ್ ಎಂಬವರು ಫೆ.21 ರಂದು ಕಾಲೇಜಿಗೆಂದು ಹೋದವರು ಕಾಲೇಜಿಗೂ ಹೋಗದೆ, ಮರಳಿ ಮನೆಗೂ ಬಾರದೆ ನಾಪತ್ತೆಯಾಗಿದ್ದ ಇಂದು ಬೆಳಗ್ಗೆ ಉಡುಪಿ ಜಿಲ್ಲೆಯಲ್ಲಿ ಕಾರಿನ ಪಕ್ಕದಲ್ಲಿ ಕುಳಿತು ಅಳುತ್ತಿದ್ದಾಗ ಸಾರ್ವಜನಿಕರು ವಿಚಾರಿಸಿದಾಗ ಮನೆ ಬಿಟ್ಟು ಬಂದಿರುವ ಬಗ್ಗೆ ಮಾಹಿತಿ ನೀಡಿದ್ದು ಅದರಂತೆ ಮನೆಯವರಿಗೆ ಮಾಹಿತಿ ಕೊಟ್ಟಿದ್ದು ಸಂಬಂಧಿಕರೊಬ್ಬರು ಬಾಲಕನನ್ನು ಕರೆತರುತ್ತಿದ್ದು, ಬೆಳಾಲಿನಿಂದ ಮನೆಯವರೂ ಉಡುಪಿಯತ್ತ ಪ್ರಯಾಣ ಬೆಳೆಸಿದ್ದಾರೆ. ಘಟನೆ ವಿವರ:

ಬೆಳಾಲು ನಿವಾಸಿಯಾಗಿರುವ ಜೆರಾಲ್ಡ್ ಡಿ’ಸೋಜಾ ಮತ್ತು ಪ್ರಮೀಳಾ ದಂಪತಿ ಪುತ್ರ ಪ್ರಥಮ್ ರವರು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಫೆ.21 ರಂದು ಮನೆಯಿಂದ ಕಾಲೇಜಿಗೆಂದು ತೆರಳಿದವರು, ತರಗತಿಗೂ ಹಾಜರಾಗದೆ, ಮರಳಿ ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ. ತಮ್ಮ ಮಗನನ್ನು ಪತ್ತೆ ಮಾಡಿಕೊಡುವಂತೆ ವಿದ್ಯಾರ್ಥಿಯ ಹೆತ್ತವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಪ್ರಕರಣ ಸುಖಾಂತಗೊಂಡಿದ್ದು ಧರ್ಮಸ್ಥಳ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ ಬಳಿಕ ನಾಪತ್ತೆಗೆ ಕಾರಣ ಸಿಗಬಹುದಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!