Home › ದಲಿತ ವ್ಯಕ್ತಿಯ ಹತ್ಯೆ ಆರೋಪಿಗಳ 24 ಗಂಟೆಗಳ ಒಳಗಾಗಿ ಬಂಧಿಸದಿದ್ದಲ್ಲಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ: ಉಸ್ತುವಾರಿ ಸಚಿವರು ಪರಿಹಾರ ಧನ ಒದಗಿಸಲಿ: ಮಾಜಿ ಶಾಸಕ ವಸಂತ ಬಂಗೇರ ಆಗ್ರಹ ಮೃತ ದಿನೇಶ್ ಅವರಿಗೆ ಕಾಂಗ್ರೆಸ್ ಪ್ರಮುಖರಿಂದ ಅಂತಿಮ ನಮನ
ದಲಿತ ವ್ಯಕ್ತಿಯ ಹತ್ಯೆ ಆರೋಪಿಗಳ 24 ಗಂಟೆಗಳ ಒಳಗಾಗಿ ಬಂಧಿಸದಿದ್ದಲ್ಲಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ: ಉಸ್ತುವಾರಿ ಸಚಿವರು ಪರಿಹಾರ ಧನ ಒದಗಿಸಲಿ: ಮಾಜಿ ಶಾಸಕ ವಸಂತ ಬಂಗೇರ ಆಗ್ರಹ ಮೃತ ದಿನೇಶ್ ಅವರಿಗೆ ಕಾಂಗ್ರೆಸ್ ಪ್ರಮುಖರಿಂದ ಅಂತಿಮ ನಮನ
ONLINE PUDU / Friday, February 25, 2022
ಧರ್ಮಸ್ಥಳ: ಕನ್ಯಾಡಿ ನಿವಾಸಿ ಬಡ ಕೂಲಿ ಕಾರ್ಮಿಕ ಕಾಂಗ್ರೆಸ್ ಕಾರ್ಯಕರ್ತ ದಲಿತ ಸಮುದಾಯದ ದಿನೇಶ್ ಎಂಬವರನ್ನು ಮನಬಂದಂತೆ ಥಳಿಸಿ ಕಿಡ್ನಿ ಇರುವ ಜಾಗಕ್ಕೆ ಒದ್ದು ಕೊಲೆ ಮಾಡಿದ ಆರೋಪಿಯು ಶಾಸಕ ಹರೀಶ್ ಪೂಂಜ ಆಪ್ತ ಜಿಲ್ಲಾ ಭಜರಂಗ ದಳದ ಮುಖಂಡ ಭಾಸ್ಕರ ಧರ್ಮಸ್ಥಳ ಎಂಬವರ ಸಹೋದರ ಬಿಜೆಪಿ ಮುಖಂಡ ಕಿಟ್ಟ ಯಾನೆ ಕೃಷ್ಣನನ್ನು ಕೆಲವರು ರಕ್ಷಣೆ ಮಾಡುತ್ತಿದ್ದು ಪೊಲೀಸರು ಮುಂದಿನ 24 ಗಂಟೆಗಳ ಒಳಗಾಗಿ ಬಂಧಿಸಬೇಕು ಇಲ್ಲವಾದಲ್ಲಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು. ಅದಲ್ಲದೇ ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್ ಮೃತರ ಮನೆಗೆ ಭೇಟಿ ನೀಡಿ ಸೂಕ್ತ ಪರಿಹಾರ ಒದಗಿಸಬೇಕೆಂದು ನಾನು ಸರಕಾರವನ್ನು ಈ ಮೂಲಕ ಆಗ್ರಹಿಸುತ್ತೇನೆ
ಎಂದರು.
ಹಲ್ಲೆಗೊಳಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಕನ್ಯಾಡಿಯ ದಿನೇಶ್ ಅವರಿಗೆ ಬೆಳ್ತಂಗಡಿ ಕಾಂಗ್ರೆಸ್ ವತಿಯಿಂದ ಅಂತಿಮ ನಮನ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಮಾಜಿ ಶಾಸಕ ವಸಂತ ಬಂಗೇರ, ಶೈಲೇಶ್ ಕುರ್ತೋಡಿ, ರಂಜನ್ ಜಿ. ಗೌಡ,ಮನೋಹರ್ ಕುಮಾರ್ ಇಳಂತಿಲ ಸೇರಿದಂತೆ ಇನ್ನಿತರ ಪಕ್ಷದ ಪ್ರಮುಖರು ಅಂತಿಮ ನಮನ ಸಲ್ಲಿಸಿದರು.