ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಗುರುವಾಯನ ಕೆರೆಯಲ್ಲಿ ಸತ್ತಿರುವ ಸುಮಾರು 3 ಕ್ವಿಂಟಾಲ್ ಮೀನುಗಳ‌ ತೆರವು ಕಾರ್ಯಾಚರಣೆ: ಸ್ಥಳೀಯ ಜನಪ್ರತಿನಿಧಿಗಳು, ಸಂಘಟನೆಗಳ ಕಾರ್ಯಕರ್ತರು, ಸಮಾಜ ಸೇವಕರ ನೆರವು

ಗುರುವಾಯನ ಕೆರೆಯಲ್ಲಿ ಸತ್ತಿರುವ ಸುಮಾರು 3 ಕ್ವಿಂಟಾಲ್ ಮೀನುಗಳ‌ ತೆರವು ಕಾರ್ಯಾಚರಣೆ: ಸ್ಥಳೀಯ ಜನಪ್ರತಿನಿಧಿಗಳು, ಸಂಘಟನೆಗಳ ಕಾರ್ಯಕರ್ತರು, ಸಮಾಜ ಸೇವಕರ ನೆರವು

 

 

 

ಬೆಳ್ತಂಗಡಿ: ಗುರುವಾಯನ ಕೆರೆಯಲ್ಲಿ ನಿನ್ನೆಯಿಂದ ಸಂಶಯಾಸ್ಪದ ರೀತಿಯಲ್ಲಿ ಮೀನುಗಳು ಸಾಯುತಿದ್ದು ಇವತ್ತು ಕೆರೆಯ ಸುತ್ತ ರಾಶಿ ರಾಶಿ ಮೀನುಗಳು ಸತ್ತು ಬಿದ್ದು

 

ಪರಿಸರ ಇಡೀ ದುರ್ನಾತ ಬೀರುತ್ತಿದ್ದು ಈ ಬಗ್ಗೆ ಕುವೆಟ್ಟು ಗ್ರಾಮ ಪಂಚಾಯತ್ ನ್ಯಾಯ ಸಮಿತಿ ಸದಸ್ಯ ಶಶಿರಾಜ್ ಶೆಟ್ಟಿ ನೇತೃತ್ವದಲ್ಲಿ ಸದಸ್ಯರುಗಳಾದ ಗಣೇಶ್ ಕುಲಾಲ್, ಸುಭಾಷ್ ಗುರುವಾಯನಕೆರೆ, ವಿಶ್ವ ಹಿಂದೂ ಪರಿಷತ್ ಸಹ ಸಂಚಾಲಕ ರಿಜಿಶ್ ಕುಮಾರ್ ಸ್ಥಳೀಯ ಜನಪ್ರತಿನಿಧಿಗಳು

ಸಾಮಾಜಿಕ ಕಾರ್ಯಕರ್ತ ಸುಭಾಷ್ ಹಾಗೂ ಸ್ಥಳೀಯರ ಸಹಕಾರದಲ್ಲಿ ತೆರವು ಕಾರ್ಯ ಪ್ರಾರಂಭಿಸಲಾಗಿದೆ ಇವತ್ತು ಸುಮಾರು 3 ಕ್ವಿಂಟಲ್ ನಷ್ಟು ಮೀನುಗಳನ್ನು ತೆರವು ಗೊಳಿಸಿ ಗುಂಡಿ ತೆಗೆದು ಮಣ್ಣಿನಲ್ಲಿ ದಫನ ಮಾಡಲಾಗಿದ್ದು

 

ಇನ್ನು ನಾಳೆ ಕಾರ್ಯಚರಣೆ ಮುಂದುವರಿಯಲಿದೆ ಎಂದು ತಿಳಿದು ಬಂದಿದೆ.ಸ್ಥಳಕ್ಕೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಭೇಟಿ ನೀಡಿದರು. ಕುವೆಟ್ಟು ಪಿಡಿಒ ಉಪಸ್ಥಿತರಿದ್ದರು.

 

 

 

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!