ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಚಾರ್ಮಾಡಿ, ತೋಟತ್ತಾಡಿ ಪರಿಸರದಲ್ಲಿ ಚಿರತೆ ಓಡಾಟ: ಹುಲಿಗಣತಿ, ಟ್ರ್ಯಾಪಿಂಗ್ ಕ್ಯಾಮರಾದಲ್ಲಿ ಸ್ಪಷ್ಟ ಛಾಯಾಚಿತ್ರ ಸೆರೆ: ರಾಷ್ಟ್ರೀಯ ಹೆದ್ದಾರಿ ಬದಿ ಚಿರತೆ ಓಡಾಟ ಊಹಾಪೋಹಗಳಿಗೆ ತೆರೆ

ಚಾರ್ಮಾಡಿ, ತೋಟತ್ತಾಡಿ ಪರಿಸರದಲ್ಲಿ ಚಿರತೆ ಓಡಾಟ: ಹುಲಿಗಣತಿ, ಟ್ರ್ಯಾಪಿಂಗ್ ಕ್ಯಾಮರಾದಲ್ಲಿ ಸ್ಪಷ್ಟ ಛಾಯಾಚಿತ್ರ ಸೆರೆ: ರಾಷ್ಟ್ರೀಯ ಹೆದ್ದಾರಿ ಬದಿ ಚಿರತೆ ಓಡಾಟ ಊಹಾಪೋಹಗಳಿಗೆ ತೆರೆ

 

 

 

ಬೆಳ್ತಂಗಡಿ:ಹುಲಿ ಗಣತಿ ಕಾರ್ಯಕ್ಕಾಗಿ ಅರಣ್ಯ ಇಲಾಖೆಯಿಂದ ನಡೆಯುತ್ತಿರುವ ಕ್ಯಾಮರಾ ಟ್ರ್ಯಾಪಿಂಗ್ ನಲ್ಲಿ,ಚಾರ್ಮಾಡಿ ಗ್ರಾಪಂ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ನೆಲ್ಲಿಗುಡ್ಡೆಯ ಪರ್ನಾಲೆ ಎಂಬಲ್ಲಿ ಇಡಲಾಗಿರುವ ಕ್ಯಾಮರಾದಲ್ಲಿ ಚಿರತೆಯು ಒಡಾಡುವ ಚಿತ್ರ ಸೆರೆಯಾಗಿದೆ. ಮಾ.7ರ ಮುಂಜಾನೆ 4ರ ಸುಮಾರಿಗೆ ಇಲ್ಲಿ ಚಿರತೆ ಓಡಾಟ ನಡೆಸಿದೆ.5ದಿನಗಳಿಗೊಮ್ಮೆ ಈ ರೀತಿ ಚಿತ್ರಗಳನ್ನು ಸಂಗ್ರಹಿಸಲಾಗುತ್ತಿದ್ದು ಆ ಸಮಯ ಚಿರತೆ ಓಡಾಟದ ಚಿತ್ರ ಕಂಡು ಬಂದಿದೆ. ಕಳೆದ ಎರಡು ವರ್ಷಗಳ ಹಿಂದೆ ಈ ಪರಿಸರದ  ಕೃಷಿಕರ ಕರುವೊಂದನ್ನು ಚಿರತೆ ಹಿಡಿದಿದ್ದು ಅದರ ಕಳೇಬರ ಈ ಸ್ಥಳದ ಆಸುಪಾಸು ಕಂಡು ಬಂದಿದ್ದು,ಸ್ಥಳದಲ್ಲಿ ಬೋನನ್ನು ಇಲಾಖೆ ವತಿಯಿಂದ ಇಡಲಾಗಿತ್ತು. ಈ ಪ್ರದೇಶವು ರಾಷ್ಟ್ರೀಯ ಹೆದ್ದಾರಿ ಸಮೀಪವಿದ್ದು ಹೆದ್ದಾರಿ ರಸ್ತೆಯಲ್ಲಿ ಆಗಾಗ ಚಿರತೆ ಓಡಾಡುವ ಕುರಿತು ವಾಹನ ಸವಾರರು ತಿಳಿಸಿದ್ದರು.ಕ್ಯಾಮರ ಟ್ರ್ಯಾಪಿಂಗ್ ನಲ್ಲಿ ಚಿರತೆ ಸೆರೆಯಾಗಿರುವುದರಿಂದ ಈಗ ಇದು ಧೃಢಪಟ್ಟಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!