ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಪಂಚರಾಜ್ಯ ಚುನಾವಣೆ  ರಾಷ್ಟ್ರ ವಾದಕ್ಕೆ ಸಿಕ್ಕ ಜಯ: ಶಾಸಕ ಹರೀಶ್ ಪೂಂಜ.

ಪಂಚರಾಜ್ಯ ಚುನಾವಣೆ  ರಾಷ್ಟ್ರ ವಾದಕ್ಕೆ ಸಿಕ್ಕ ಜಯ: ಶಾಸಕ ಹರೀಶ್ ಪೂಂಜ.

 

 

 

ಬೆಳ್ತಂಗಡಿ:ಪಂಚರಾಜ್ಯಗಳ ಚುನಾವಣೆ ರಾಷ್ಟ್ರ ವಾದಕ್ಕೆ ಸಿಕ್ಕ ಜಯ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸಂತಸ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ವಿಚಾರ ಧಾರೆಗಳನ್ನು ಇಟ್ಟುಕೊಂಡು ಭಾರತೀಯ ಜನತಾ ಪಾರ್ಟಿ ದೇಶದಾದ್ಯಂತ ಮಾಡಿರುವ ಕೆಲಸ ಕಾರ್ಯಗಳಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಪರ ಚಿಂತನೆಗಳು ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಅವರ ಅಭಿವೃದ್ಧಿ ಕಾರ್ಯ ಮತ್ತು ರಾಷ್ಟ್ರೀಯ ವಿಚಾರ ಧಾರೆಗಳ ಕೆಲಸಕ್ಕೆ ಮನಸೋತಿರುವಂತಹ ಪ್ರಜ್ಞಾವಂತ ಜನ ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಭಾರತೀಯ ಜನತಾ ಪಾರ್ಟಿಯ ಯೋಗಿಜೀಯವರನ್ನು ಮುಖ್ಯಮಂತ್ರಿಗಳನ್ನಾಗಿ ಆಯ್ಕೆ ಮಾಡಿದ್ದಾರೆ.ಗೋವಾದಲ್ಲಿ ಪರಿಕರ್ರ್ ನಂತರ ಬಂದಿರುವ ಸಾವಂತ್ ಅವರು ಬಹಳ ಉತ್ತಮವಾಗಿರುವಂತಹ ಕೆಲಸಗಳನ್ನು ನಿರ್ವಹಿಸಿ ಗೋವಾದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದಾರೆ.ಉತ್ತರಾಖಂಡ್ ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವಂತದ್ದು ಮಿಜೋರಾಂ ನಲ್ಲಿ ಇಷ್ಟರವರೆಗೆ ಇತರ ಮಿತ್ರ ಪಕ್ಷಗಳೊಂದಿಗೆ ಮೈತ್ರಿ ಸರ್ಕಾರ ಇತ್ತು ಅದರೆ ಈ ಬಾರಿ ಭಾರತೀಯ ಜನತಾ ಪಾರ್ಟಿ ಸ್ವತಂತ್ರವಾಗಿ ಅಧಿಕಾರಕ್ಕೆ ಹಿಡಿಯುವ ಮೂಲಕ ಪಂಚರಾಜ್ಯಗಳಲ್ಲಿ ಭಾರತೀಯ ಜನತಾ ಪಾರ್ಟಿ ಅಭೂತ ಪೂರ್ವ ಜಯಗಳಿಸಿದೆ.ಈ ಜಯ ನಮ್ಮೆಲ್ಲರ ನಾಯಕರಾದ ನರೇಂದ್ರ ಮೋದಿಯವರ ಅಭಿವೃದ್ಧಿಯ ಹಾಗೂ ಜನಪರ ಕಾಳಜಿ ಮತ್ತು ವಿವಿಧ ರಾಜ್ಯಗಳ ಜನಪರ ಕೆಲಸಗಳಿಗೆ ಸಿಕ್ಕ ಜಯ ಎಂದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!