ಶೃಂಗೇರಿಯಿಂದ ಆರಂಭವಾದ ಎಲೆಚುಕ್ಕಿರೋಗ ಸುಳ್ಯ, ಸಂಪಾಜೆ, ಮಡಿಕೇರಿ, ಕೊಪ್ಪ, ಕಳಸ ಸೇರಿದಂತೆ ಅನೇಕ ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಹಾಗೂ ನೀರುಪಾಲದಲ್ಲೂ ಈ ರೋಗ ಹಬ್ಬಿದೆ. ಸುಮಾರು 3-4 ವರ್ಷದಿಂದ ಈ ರೋಗ ಕಾಣಿಸಿಕೊಳುತ್ತಿದ್ದು, ಈ ರೋಗವನ್ನು ತಡೆಯಲು ರೈತರು ಕೆಲವು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಯಾವ ತೋಟದಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಳ್ಳುತ್ತಿದೆಯೋ ಆ ತೋಟಕ್ಕೆ ಔಷಧ ಸಿಂಪಡಿಸಬೇಕು. ರೋಗ ಹಿಡಿದ ಎಲೆಯನ್ನು, ಗರಿಯನ್ನು ತೆಗಿಯಬೇಕು ಜೊತೆಗೆ ಅದನ್ನು ಸುಡಬೇಕು. ತೋಟವನ್ನು ಆದಷ್ಟು ಶುಚಿಯಾಗಿಟ್ಟುಕೊಳ್ಳಬೇಕು. ಇದು ಒಂದು ಫಂಗಸ್‌ನಿಂದ ಹರಡುತ್ತಿರುವ ಕಾರಣ ಕೆಮಿಕಲ್ ಸ್ಪ್ರೇ ಮಾಡಬೇಕು. ಈ ಸಮಸ್ಯೆಯ ಬಗ್ಗೆ ಸರ್ಕಾರದ ಗಮನ ಸೆಳೆಯಲು ಒಂದು ತಂಡ ರಚನೆಯಾಗಿದ್ದು ಎಲ್ಲಾ ಕಡೆಯ ಮಾಹಿತಿಯನ್ನು ಕಲೆಹಾಕಿ ಸರ್ಕಾರಕ್ಕೆ ನೀಡುತ್ತೇವೆ. ಮುಂದಿನ ದಿನಗಳಲ್ಲಿ ಸಂಶೋಧನೆಗಳು ನಡೆಯಲಿದೆ. ಇದಕ್ಕೆ ಸರ್ಕಾರದಿಂದ ಸಹಾಯ ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ .ಬಿ, ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ಉಪಕಾರ್ಯದರ್ಶಿ ಕೆ. ಆನಂದ್ ಕುಮಾರ್ ಉಪಸ್ಥಿತರಿದ್ದರು.