ನೆತ್ತಿಮೇಲೆ ಉರಿಯೋ ಸೂರ್ಯ, ಪಾದಗಳನ್ನು ಸುಡುವ ಭೂಮಿ, ಸುತ್ತಲೂ ಬಿಸಿಗಾಳಿ. ಬಾಯಾರಿಕೆ ತಣಿಸಲು ತಂಪುಪಾನಿಯಗಳು ಬೇಕೇ-ಬೇಕು. ಜನರ ಬಾಯಾರಿಕೆ ತಣಿಸಲೆಂದೇ ರೆಡ್‌ಕ್ರಾಸ್ ವತಿಯಿಂದ ಸಾರ್ವಜನಿಕರಿಗೆ ಮಜ್ಜಿಗೆ ವಿತರಣೆ ಮಾಡಲಾಗುತಿದ್ದು ರೆಡ್ ಕ್ರಾಸ್ ಸಂಸ್ಥೆಯ ಈ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತಿದ್ದಾರೆ. ಈ ಸಂದರ್ಭದಲ್ಲಿ ರೆಡ್‌ಕ್ರಾಸ್ ಅಧ್ಯಕ್ಷ ಹರಿಪ್ರಸಾದ್, ಕಾರ್ಯದರ್ಶಿ ಯಶವಂತ ಪಟವರ್ಧನ್, ಸದಸ್ಯರಾದ ಶ್ರೀಮತಿ ಸುಕನ್ಯಾ, ಪರಿಮಳಾ, ಸುಜಿತ್ ಉಪಸ್ಥಿತರಿದ್ದರು.
Home › ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ರೆಡ್‌ಕ್ರಾಸ್ ವತಿಯಿಂದ ಉಚಿತ ಮಜ್ಜಿಗೆ ವಿತರಣೆ: ಬಿಸಿಲ ಬೇಗೆಯಿಂದ ಬಾಯಾರಿದ ಸಾರ್ವಜನಿಕರಿಗೆ ತಂಪಾದ ಮಜ್ಜಿಗೆ..!