ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ನರೇಗಾ ಕಾರ್ಮಿಕರ ದಿನಗೂಲಿ ದರ ಹೆಚ್ಚಳ: ಶೇ.3ರಿಂದ 10ರಷ್ಟು ಹೆಚ್ಚಿಸಿ ಆದೇಶಿಸಿದ ಕೇಂದ್ರ ಸರ್ಕಾರ: ಏ.1ರಿಂದ ಜಾರಿ

ನರೇಗಾ ಕಾರ್ಮಿಕರ ದಿನಗೂಲಿ ದರ ಹೆಚ್ಚಳ: ಶೇ.3ರಿಂದ 10ರಷ್ಟು ಹೆಚ್ಚಿಸಿ ಆದೇಶಿಸಿದ ಕೇಂದ್ರ ಸರ್ಕಾರ: ಏ.1ರಿಂದ ಜಾರಿ

ನವದೆಹಲಿ: 2024-25ನೇ ಆರ್ಥಿಕ ವರ್ಷದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ದಿನಗೂಲಿ ದರವನ್ನು ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ದಿನವೊಂದಕ್ಕೆ 349 ರೂಪಾಯಿಗೆ ಹೆಚ್ಚಿಸಿದೆ.

2024-25ನೇ ಆರ್ಥಿಕ ವರ್ಷದಲ್ಲಿ ದೇಶಾದ್ಯಂತ ನರೇಗಾದ ಸರಾಸರಿ ಕೂಲಿ 289 ರೂ ಆಗಲಿದೆ. 2023-24ರ ಆರ್ಥಿಕ ವರ್ಷದಲ್ಲಿ ಈ ದರ 261 ರೂ ಆಗಿದ್ದು, ಇದೀಗ 28 ರೂ ಏರಿಕೆ ಮಾಡಲಾಗಿದ್ದು ಏ.1ರಿಂದ ಈ ಆದೇಶದ ಅನ್ವಯ 349 ರೂಪಾಯಿಗೆ ಏರಿಕೆಯಾಗಲಿದೆ.

2024-25ರಲ್ಲಿನ ಕೇಂದ್ರ ಬಜೆಟ್‌ನಲ್ಲಿ ನರೇಗಾಗಾಗಿ ಕೇಂದ್ರ ಸರ್ಕಾರ 86 ಸಾವಿರ ಕೋಟಿ ರೂ ಮೀಸಲಿಟ್ಟಿದ್ದು, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಈ ದರ ಶೇ.10ರಷ್ಟು ಏರಿಕೆಯಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!