Home › ಪಿಕಪ್ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ: ಓರ್ವ ಮೃತ್ಯು: ಇನ್ನೋರ್ವ ಗಂಭೀರ!: ಬೆಳ್ತಂಗಡಿಯ ಹಳೇಕೋಟೆ ಬಳಿ ಘಟನೆ
ಪಿಕಪ್ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ: ಓರ್ವ ಮೃತ್ಯು: ಇನ್ನೋರ್ವ ಗಂಭೀರ!: ಬೆಳ್ತಂಗಡಿಯ ಹಳೇಕೋಟೆ ಬಳಿ ಘಟನೆ
ONLINE PUDU / Monday, March 25, 2024
ಬೆಳ್ತಂಗಡಿ: ಪಿಕಪ್ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪಿದ ಘಟನೆ ಹಳೆಕೋಟೆ ಬಳಿ ಮಾ.25 ರಂದು ಮಧ್ಯಾಹ್ನ ಸಂಭವಿಸಿದೆ.

ಮೃತಪಟ್ಟ ದ್ವಿಚಕ್ರ ವಾಹನ ಸವಾರ ಲಾಯಿಲಾ ಗ್ರಾಮದ ರಾಘವೇಂದ್ರ ನಗರದ ನಿವಾಸಿ ಜಯರಾಮ ಅವರ ಪುತ್ರ ಪುರುಷೋತ್ತಮ ಎಂದು ತಿಳಿದು ಬಂದಿದ್ದು , ಗಂಭೀರ ಗಾಯಗೊಂಡ ವ್ಯಕ್ತಿ ರಾಘವೇಂದ್ರ ನಗರದ ತೌಫಿಕ್ ಎಂದು ತಿಳಿದು ಬಂದಿದೆ.

ಗುರುವಾಯನಕೆರೆ ಕಡೆಯಿಂದ ಬೆಳ್ತಂಗಡಿ ಕಡೆಗೆ ಹೋಗುತಿದ್ದ ದ್ವಿಚಕ್ರ ವಾಹನಕ್ಕೆ ಎದುರಿನಿಂದ ಬರುತಿದ್ದ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ದ್ವಿ ಚಕ್ರ ವಾಹನ ಮಗುಚಿ ಬಿದ್ದು ಸವಾರರಿಬ್ಬರೂ ರಸ್ತೆಗೆಸೆಯಲ್ಪಟ್ಟು ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೋರ್ವರು ಗಂಭೀರ ಗಾಯಗೊಂಡಿದ್ದಾರೆ.
ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಬೆಳ್ತಂಗಡಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.