Home › ಬೆಳ್ತಂಗಡಿ: ರಸ್ತೆ ಬದಿ ಪ್ರಾಣ ಕಳೆದುಕೊಂಡ ರಾಷ್ಟ್ರಪಕ್ಷಿ: ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ ಶಂಕೆ: ಚರ್ಚ್ ರೋಡ್ ಸಮೀಪದ ಕಲ್ಲಗುಡ್ಡೆಯಲ್ಲಿ ಘಟನೆ
ಬೆಳ್ತಂಗಡಿ: ರಸ್ತೆ ಬದಿ ಪ್ರಾಣ ಕಳೆದುಕೊಂಡ ರಾಷ್ಟ್ರಪಕ್ಷಿ: ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ ಶಂಕೆ: ಚರ್ಚ್ ರೋಡ್ ಸಮೀಪದ ಕಲ್ಲಗುಡ್ಡೆಯಲ್ಲಿ ಘಟನೆ
ONLINE PUDU / Saturday, May 18, 2024
ಬೆಳ್ತಂಗಡಿ: ಚರ್ಚ್ ರೋಡ್ ಸಮೀಪದ ಕಲ್ಲಗುಡ್ಡೆ ಎಂಬಲ್ಲಿ ರಾಷ್ಟçಪಕ್ಷಿ ನವಿಲು ಪ್ರಾಣ ಕಳೆದುಕೊಂಡು ರಸ್ತೆ ಬದಿ ಬಿದ್ದಿರುವ ಘಟನೆ ಮೇ.18ರಂದು ಸಂಭವಿಸಿದೆ.
ನವಿಲು ರಸ್ತೆ ಬದಿ ಬಿದ್ದದ್ದನ್ನು ನೋಡಿದ ಸಾರ್ವಜನಿಕರು ಯಾವುದೋ ವಾಹನಕ್ಕೆ ಡಿಕ್ಕಿಯಾಗಿ, ಅಥವಾ ವಾಹನ ಡಿಕ್ಕಿಯಾಗಿ ನವಿಲು ಮೃತಪಟ್ಟಿದೆ ಎಂದು ಅನುಮಾನಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಬೆಳ್ತಂಗಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.