ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮಾಧ್ಯಮ ವರದಿ ಬೆನ್ನಲ್ಲೇ ಹರ್ಪಳ ರಸ್ತೆಗೆ ಬಿದ್ದ ಮರ ತೆರವು: 11 ದಿನದ ನಂತರ ಮರ ತೆರವುಗೊಳಿಸಿದ ಅಧಿಕಾರಿಗಳು

ಮಾಧ್ಯಮ ವರದಿ ಬೆನ್ನಲ್ಲೇ ಹರ್ಪಳ ರಸ್ತೆಗೆ ಬಿದ್ದ ಮರ ತೆರವು: 11 ದಿನದ ನಂತರ ಮರ ತೆರವುಗೊಳಿಸಿದ ಅಧಿಕಾರಿಗಳು

ಕೊಯ್ಯೂರು:  ಹರ್ಪಳದಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಬೃಹತ್ ಮರವನ್ನು ಪ್ರಜಾಪ್ರಜಾಶ ನ್ಯೂಸ್ ವರದಿಯ ಬೆನ್ನಲ್ಲೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಕಳೆದ 12 ದಿನಗಳ ಹಿಂದೆ ಇಲ್ಲಿ ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಸಂಚಾರ ಕಷ್ಟಕರವಾಗಿತ್ತು. ಈ ಕುರಿತು ಜು.06ರಂದು ಪ್ರಜಾಪ್ರಜಾಶ ನ್ಯೂಸ್ ಈ ಭಾಗದ ಜನರ ಸಂಕಷ್ಟದ ಬಗ್ಗೆ ವರದಿ ಬಿತ್ತರಿಸಿತ್ತು. ಈ ಬೆನ್ನಲ್ಲೆ ಪಂಚಾಯತ್ ಎಚ್ಚೆತ್ತುಕೊಂಡು ಅರಣ್ಯ ಇಲಾಖೆಯ ಅಧಿಕಾರಿಗಳು ಮರ ತೆರವುಗೊಳಿಸಿದ್ದಾರೆ. ಆದರೆ ಈ ಕೆಲಸ ಕಾಟಾಚಾರಕ್ಕೆ ಮಾಡಿದಂತಾಗಿದೆ.

ಮರದ ದಿಮ್ಮಿಗಳನ್ನು ಅಲ್ಲೇ ಬದಿಗೆ ಸರಿಸಿದ್ದು ಜೊತೆಗೆ ತೊರೆಯಲ್ಲಿ ಬಿದ್ದಿರುವ ಮರದ ದಿಮ್ಮಿಗಳನ್ನು ಅಲ್ಲೆ ಬಿಟ್ಟು ಬಿಡಲಾಗಿದೆ. ಇಲ್ಲಿನ ಸಮಸ್ಯೆಯ ಪರಿಹಾರ ಮೊದಲು ಸೂಚನಾ ಫಲಕಕ್ಕೆ ಸೀಮಿತಗೊಳಿಸಲಾಗಿತ್ತು, ಈಗ ಮರವನ್ನು ಅಲ್ಲಿಂದಲ್ಲಿಗೆ ತೆರವುಗೊಳಿಸಲಾಗಿದೆ.

http://prajaprakasha.com/?p=28912

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!