ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಹುಲಿ ದಾಳಿಗೆ ವ್ಯಕ್ತಿ ಬಲಿ: ಪ್ರತೀಕಾರವಾಗಿ 10 ವರ್ಷದ ಗಂಡು ಹುಲಿಯನ್ನು ಕೊಂದ ಗ್ರಾಮಸ್ಥರು..!

ಹುಲಿ ದಾಳಿಗೆ ವ್ಯಕ್ತಿ ಬಲಿ: ಪ್ರತೀಕಾರವಾಗಿ 10 ವರ್ಷದ ಗಂಡು ಹುಲಿಯನ್ನು ಕೊಂದ ಗ್ರಾಮಸ್ಥರು..!

 

ಸಾಂದರ್ಭಿಕ ಚಿತ್ರ

ಜೈಪುರ: ಹುಲಿ ದಾಳಿಗೆ ವ್ಯಕ್ತಿ ಬಲಿಯಾಗಿದ್ದಕ್ಕೆ ಕೋಪಗೊಂಡ ಗ್ರಾಮಸ್ಥರು 10 ವರ್ಷದ ಗಂಡು ಹುಲಿಯನ್ನು ಕೊಂದು ಪ್ರತಿಕಾರ ತೀರಿಸಿಕೊಂಡ ಘಟನೆ ರಾಜಸ್ಥಾನದ ರಣಥಾಂಬೋರ್ ರಾಷ್ಟ್ರೀಯ ಉದ್ಯಾನವನ ಸಮೀಪದ ಉಲಿಯಾನಾ ಗ್ರಾಮದಲ್ಲಿ ಸಂಭವಿಸಿದೆ.

ಉಲಿಯಾನಾ ಗ್ರಾಮದಲ್ಲಿ ಶನಿವಾರ ಹುಲಿಯೊಂದು ದಾಳಿ ಮಾಡಿ 45 ವರ್ಷದ ವ್ಯಕ್ತಿಯೊಬ್ಬರನ್ನು ಕೊಂದು ಹಾಕಿತ್ತು. ಇದರಿಂದ ಉದ್ರಿಕ್ತರಾದ ಜನತೆ ದಿಢೀರ್ ಪ್ರತಿಭಟನೆ ನಡೆಸಿದ್ದು, ಮೃತ ವ್ಯಕ್ತಿಯ ಶವದೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಉದ್ಯಾನವನಕ್ಕೆ ಹೋಗುವ ರಸ್ತೆಯನ್ನು ತಡೆದಿದ್ದರು. ರಾಜ್ಯ ಸರ್ಕಾರದ ಅಧಿಕಾರಿಗಳ ಜತೆಗಿನ ಮಾತುಕತೆ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆದರು.

ಇಲ್ಲಿಗೆ ಸುಮ್ಮನಾಗದ ಗ್ರಾಮಸ್ಥರು ಹುಲಿಯೊಂದನ್ನು ಸುತ್ತುವರಿದು ಕಲ್ಲು ಮತ್ತು ಕೊಡಲಿಯಿಂದ ದಾಳಿ ನಡೆಸಿ ಅದನ್ನು ಕೊಂದು ಹಾಕಿದ್ದಾರೆ ಎನ್ನಲಾಗಿದೆ. ರವಿವಾರ ತಡರಾತ್ರಿವರೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಯ ಶವವನ್ನು ವಶಕ್ಕೆ ಪಡೆದಿರಲಿಲ್ಲ ಎಂದು ತಿಳಿದು ಬಂದಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!