ಅಕ್ಷಯನಗರ ನಿವಾಸಿ ಪ್ರಮೋದ್ ಗೌಡ (35) ನಿನ್ನೆ ರಾತ್ರಿ ಊಟ ಮುಗಿಸಿ ಕಬಡ್ಡಿ ಪಂದ್ಯಾಟ ವೀಕ್ಷಣೆಯನ್ನು ಮಾಡುತ್ತಿದ್ದರು. ಇವರ ತಂದೆ ಮೋನಪ್ಪ ಗೌಡ ಊಟ ಮಾಡಿ ಮಲಗಿದ ನಂತರ ಸುಮಾರು ಹೊತ್ತಿನವರೆಗೂ ಟಿವಿ ಚಾಲನೆಯಲ್ಲೆ ಇತ್ತು.
ರಾತ್ರಿ ಸುಮಾರು 12:00 ಗಂಟೆಗೆ ಟಿವಿ ಆಫ್ ಮಾಡಲು ಬಂದಾಗ ಪ್ರಮೋದ್ ಗೌಡ ಅವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.