ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ದಯಾ ವಿಶೇಷ ಶಾಲೆಯಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ

ದಯಾ ವಿಶೇಷ ಶಾಲೆಯಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ

ಬೆಳ್ತಂಗಡಿ: ದಯಾ ವಿಶೇಷ ಶಾಲೆ, ವಿಮುಕ್ತಿ, ಲಾಯಿಲ ಇಲ್ಲಿ ಡಿ.04ರಂದು ರಂದು ವಿಶ್ವ ಅಂಗವಿಕಲರ ದಿನಾಚರಣೆಯನ್ನು ಆಚರಿಸಲಾಯಿತು.

ವಂ.ಫಾ.ವಿನೋದ್ ಮಸ್ಕರೇನಸ್ ರವರು ಮಾತನಾಡಿ, ಪ್ರತಿ ಸರಕಾರಿ ಕಛೇರಿಗಳಲ್ಲಿ ಹಾಗೂ ಇನ್ನಿತರ ಸಾಮಾಜಿಕ ವ್ಯವಸ್ಥೆಗಳಲ್ಲಿ ವಿಶೇಷ ಚೇತನ ಮಕ್ಕಳಿಗೆ ವಿವಿಧ ಉದ್ಯೋಗ ಅವಕಾಶಗಳು ಒದಗಿಸಿಕೊಡುವ ಅಗತ್ಯವಿದೆ. ನಮ್ಮ ಸಮಾಜದಲ್ಲಿ ವಿಶೇಷ ಚೇತನ ಮಕ್ಕಳಿಗೆ ಸಂಬಂಧಿಸಿದಂತೆ ಮಗು ಸ್ನೇಹಿ ವಾತಾವರಣವನ್ನು ಬೆಳೆಸಬೇಕು ಇದರಿಂದ ಈ ಮಕ್ಕಳಿಗೂ ಸಮಾನ ಅವಕಾಶವನ್ನು ನಾವು ನೀಡಿದಂತಾಗುವುದು ಎಂದರು.

ವಾಣಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಯದುಪತಿ ಗೌಡ ಅವರು ಮಾತನಾಡಿ, ವಿಶೇಷ ಚೇತನ ಮಕ್ಕಳಿಗೂ ಈ ಸಮಾಜದಲ್ಲಿ ಸಮಾನ ಸ್ಥಾನಮಾನಗಳನ್ನು ಪಡೆದು ಬದುಕುವ ಹಕ್ಕಿದೆ. ಶಾಲೆಯಲ್ಲಿ ಪ್ರತಿಯೊಬ್ಬ ಮಗುವೂ ಒಂದಲ್ಲ ಒಂದು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಇಂತಹ ದಿವ್ಯಾಂಗ ಮಕ್ಕಳ ಸೇವೆಯನ್ನು ಮಾಡುತ್ತಿರುವ ಈ ಸಂಸ್ಥೆಯು ನಮ್ಮ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ನಮಗೆ ಹೆಮ್ಮೆಯ ವಿಚಾರ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಬೆಳ್ತಂಗಡಿ ಇಲ್ಲಿನ ಯೋಜನಾಧಿಕಾರಿ ಪ್ರಿಯಾ ಆಗ್ನೆಸ್ ಮಾತನಾಡಿ, ಸಮಾಜದಲ್ಲಿರುವ ನಾವೆಲ್ಲರೂ ಒಂದಾಗಿ ಈ ವಿಶೇಷ ಚೇತನ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡಬೇಕಾಗಿದೆ. ಈ ಮಕ್ಕಳಿಗೆ ಇಂದು ಸಾಧನೆ ಮಾಡಲು ಅವಕಾಶಗಳು ಬಹಳಷ್ಟು ಇವೆ. ಪೋಷಕರು ತಮ್ಮ ಮಕ್ಕಳನ್ನು ತಮ್ಮ ಜೊತೆಯಲ್ಲಿರಿಸಿಕೊಂಡು, ಅವರ ಆರೈಕೆ ಮಾಡಿ, ಅವರಿಗೆ ತಮ್ಮ ಜೀವನ ನಿರ್ವಹಣೆಗೆ ಬೇಕಾದ ಅಗತ್ಯ ಕೌಶಲ್ಯಗಳನ್ನೂ ಕಲಿಸಿಕೊಡಬೇಕಾಗುತ್ತದೆ. ನಮ್ಮೆಲ್ಲ ಪೋಷಕರಿಗೆ ಈ ಸಂಸ್ಥೆಯು ಒಂದು ವರದಾನವಾಗಿದೆ ಎಂದರು.

ಜಿಲ್ಲಾ ಮಟ್ಟದಲ್ಲಿ ನಡೆದ ಸ್ಪೆಷಲ್ ಒಲಿಂಪಿಕ್ ಕ್ರೀಡಾ ಕೂಟ ಹಾಗೂ ಶಾಲಾ ಮಟ್ಟದಲ್ಲಿ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ಗೇರುಕಟ್ಟೆಯ ಮನ್‌ಶರ್ ಪ್ಯಾರಾ ಮೆಡಿಕಲ್ ಕಾಲೇಜ್ ಪ್ರಾಂಶುಪಾಲರಾದ ಹೈದರ್ ಹಾಗೂ ಅಲ್ಲಿನ ಶಿಕ್ಷಣಾಧಿಕಾರಿಗಳು ಮತ್ತು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಶಾಲಾ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ನೆರವೇರಿಸಿಕೊಟ್ಟರು.

ವಂ.ಫಾ.ರೋಹನ್ ಲೋಬೋ, ಸಹ-ನಿರ್ದೇಶಕರು ಸಿ.ಕೆ.ಎಸ್.ಕೆ, ಶಾಲಾ ಪೋಷಕ ಪ್ರತಿನಿಧಿಯಾಗಿ ಶುಭಕರ್, ಶಾಲಾ ವಿಧ್ಯಾರ್ಥಿ ಪ್ರತಿನಿಧಿಯಾಗಿ ಮಾಸ್ಟರ್ ಸಾಬಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಶಿಕ್ಷಕಿ ಕುಮಾರಿ ನಳಿನಾಕ್ಷಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಕುಮಾರಿ ಸ್ವಾತಿ ವಂದಿಸಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!