ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಉದ್ಯೋಗ ಖಾತರಿ ಯೋಜನೆಯಲ್ಲಿ ಹಣ ವಸೂಲಿ ಆರೋಪ! ಅಧಿಕಾರಿಗಳ ಹೆಸರಿನಲ್ಲಿ ಫಲಾನುಭವಿಗಳಿಂದ ಹಣ ಸಂಗ್ರಹ: ತನಿಖೆಗೆ ಸಾರ್ವಜನಿಕರ ಒತ್ತಾಯ:

ಉದ್ಯೋಗ ಖಾತರಿ ಯೋಜನೆಯಲ್ಲಿ ಹಣ ವಸೂಲಿ ಆರೋಪ! ಅಧಿಕಾರಿಗಳ ಹೆಸರಿನಲ್ಲಿ ಫಲಾನುಭವಿಗಳಿಂದ ಹಣ ಸಂಗ್ರಹ: ತನಿಖೆಗೆ ಸಾರ್ವಜನಿಕರ ಒತ್ತಾಯ:

 


                       ಸಾಂದರ್ಭಿಕ ಚಿತ್ರ


ಬೆಳ್ತಂಗಡಿ: ಗ್ರಾಮೀಣ ಅಭಿವೃದ್ಧಿಗೆ ರೂಪಿಸಲಾದ ವಿಬಿ ಜಿ ರಾಮ್ ಜಿ  ವಿಕಸಿತ ಭಾರತ ಉದ್ಯೋಗ ಖಾತರಿ ಮತ್ರು ಜೀವನೋಪಾಯ ಮಿಷನ್   ಯೋಜನೆಯಲ್ಲಿ ಅರ್ಹ  ಫಲಾನುಭವಿಗಳಿಗೆ ಲಂಚದ  ಬೇಡಿಕೆ ಆರೋಪಗಳು ತಾಲೂಕಿನ ವಿವಿಧ ಪಂಚಾಯತ್ ಗಳಲ್ಲಿ  ಕೇಳಿಬರುತ್ತಿದೆ. 




 ಉದ್ಯೋಗ ಖಾತರಿ ಯೋಜನೆಯ ಪಂಚಾಯತ್ ಮಟ್ಟದ ಸಿಬ್ಬಂದಿಗಳು,  ಅಧಿಕಾರಿಗಳ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರುವ   ಆರೋಪಗಳು ಕೇಳಿಬರುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.


ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಒದಗಿಸುವುದು, ಕೃಷಿ ಚಟುವಟಿಕೆಗಳಿಗೆ ಪೂರಕವಾದ ಕಾಮಗಾರಿಗಳನ್ನು ಕೈಗೊಳ್ಳುವುದು ಹಾಗೂ ಗ್ರಾಮಗಳ ಅಭಿವೃದ್ಧಿಗೆ ಉತ್ತೇಜನ ನೀಡುವುದು  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಆದರೆ, ಇಂತಹ ಜನಪರ ಯೋಜನೆಯಲ್ಲಿಯೇ ಅಧಿಕಾರಿಗಳ ಹೆಸರಿನಲ್ಲಿ ಕೃಷಿಕರಿಂದ,ಫಲಾನುಭವಿಗಳಿಂದ  ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿರುವುದು ಯೋಜನೆಯ ಪಾರದರ್ಶಕತೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.


ಅಧಿಕಾರಿಗಳ ಹೆಸರಿನಲ್ಲಿ ಸಿಬ್ಬಂದಿಗಳಿಂದ  ಹಣ ವಸೂಲಿ ಆರೋಪ


ಈ‌ ಯೋಜನೆಯಡಿ ಕೃಷಿಕರಿಗೆ ಫಲಾನುಭವಿಗಳಿಗೆ  ಸಿಗಬೇಕಾದ ಸೌಲಭ್ಯಗಳು, ಕಾಮಗಾರಿಗಳ ಅನುಮೋದನೆ ಅಥವಾ ಇತರೆ ಪ್ರಕ್ರಿಯೆಗಳ ಹೆಸರಿನಲ್ಲಿ ಹಣ ಕೇಳಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಒಂದು ವೇಳೆ ಈ ಬಗ್ಗೆ ಪ್ರಶ್ನಿಸಿದರೆ,ಅಥವಾ ಹಣ ನೀಡದೆ ಇದ್ದರೆ   ಇಲ್ಲ ಸಲ್ಲದ ನೆಪವೊಡ್ಡಿ ಫಲಾನುಭವಿಗಳನ್ನು ಸತಾಯಿಸುವ ಕೆಲಸ ನಡೆಯುತ್ತದೆ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ.

ಅಧಿಕಾರಿಗಳ , ಹೆಸರನ್ನು ಬಳಸಿಕೊಂಡು ಹಣ ಸಂಗ್ರಹಿಸುವ ಪ್ರಯತ್ನ ಪಂಚಾಯತ್ ಮಟ್ಟದಲ್ಲಿ  ನಡೆಯುತ್ತಿದ್ದರೆ, ಅದು ಗಂಭೀರ ವಿಚಾರವಾಗಿದ್ದು, ಸಂಬಂಧಪಟ್ಟ ಇಲಾಖೆಯು ತಕ್ಷಣವೇ ಗಮನಹರಿಸಬೇಕಾಗಿದೆ.ಫಲಾನುಭವಿಗಳು ನೀಡಿದ ಮಾಹಿತಿಯಂತೆ ಒಂದು ಸಾವಿರದಿಂದ ಐದು ಸಾವಿರದವರೆಗೆ ಡಿಮ್ಯಾಂಡ್  ಮಾಡುತ್ತಿರುವ ಆರೋಪಗಳು ಕೇಳಿಬರುತ್ತಿದೆ


ಈ ರೀತಿಯ ಆರೋಪಗಳಿಂದ ಯೋಜನೆಯ ನೈಜ ಫಲಾನುಭವಿಗಳಾದ ಕೃಷಿಕರು ಹಾಗೂ ಗ್ರಾಮೀಣ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯಲು ಅನಧಿಕೃತವಾಗಿ ಹಣ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.


ಕೃಷಿಕರ ಹಿತಾಸಕ್ತಿಗೆ ಧಕ್ಕೆ?


ಕೃಷಿಕರು ತಮ್ಮ ಜಮೀನುಗಳಲ್ಲಿ ಈ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಆಸಕ್ತಿ ಹೊಂದಿರುತ್ತಾರೆ. ಆದರೆ, ಯೋಜನೆಯ ಪ್ರಕ್ರಿಯೆಯಲ್ಲಿ ಹಣದ ಬೇಡಿಕೆ ಎದುರಾದರೆ, ಸಣ್ಣ ಮತ್ತು ಮಧ್ಯಮ ಕೃಷಿಕರಿಗೆ ಆರ್ಥಿಕ ಹೊರೆಯಾಗುವ ಸಾಧ್ಯತೆ ಇದೆ.


ಸರ್ಕಾರ ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸಲು ಜಾರಿಗೊಳಿಸಿರುವ ಯೋಜನೆಗಳು ಮಧ್ಯವರ್ತಿಗಳ ಹಾವಳಿಗೆ ಒಳಗಾಗಬಾರದು. ಯೋಜನೆಯ ಲಾಭ ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂಬುದು ಕೃಷಿಕರ ಆಶಯವಾಗಿದೆ.


ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಲಿ


ಅಧಿಕಾರಿಗಳ ಹೆಸರಿನಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪದ ಕುರಿತು ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸಬೇಕು. ಹಣ ಕೇಳಿದವರು ಯಾರು? ಯಾವ ಉದ್ದೇಶಕ್ಕಾಗಿ ಹಣ ಕೇಳಲಾಗಿದೆ? ಹಣ ವಸೂಲಿಯಲ್ಲಿ ಅಧಿಕಾರಿಗಳ ಪಾತ್ರವಿದೆಯೇ ಅಥವಾ ಅವರ ಹೆಸರನ್ನು ದುರುಪಯೋಗಪಡಿಸಿಕೊಳ್ಳಲಾಗಿದೆಯೇ? ಅಥವಾ ಉದ್ದೇಶಪೂರ್ವಕವಾಗಿ ಆರೋಪಗಳನ್ನು ಮಾಡಲಾಗುತ್ತಿದೆಯೇ  ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ದೊರೆಯಬೇಕಾಗಿದೆ.

ಒಟ್ಟಿನಲ್ಲಿ, ಕೃಷಿಕರಿಂದ ಅಧಿಕಾರಿಗಳ ಹೆಸರಿನಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರವಾಗಿದೆ. ಗ್ರಾಮೀಣ ಜನರ ಹಿತಕ್ಕಾಗಿ ಜಾರಿಗೊಂಡಿರುವ ನರೇಗಾ ಯೋಜನೆ ಭ್ರಷ್ಟಾಚಾರ ಮುಕ್ತವಾಗಿ ಅನುಷ್ಠಾನಗೊಳ್ಳಬೇಕು. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಕೃಷಿಕರಿಗೆ ನ್ಯಾಯ ಒದಗಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.ಅದೇ ರೀತಿ ಫಲಾನುಭವಿಗಳು ಕೂಡ ಹಣ ವಸೂಲಿ ಮಾಡಿದವರ ಮಾಹಿತಿಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರಬೇಕು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!