ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಪತ್ರಕರ್ತರ ಸಾಮಾಜಿಕ ಮತ್ತು ಕುಟುಂಬ ಭದ್ರತಾ ಯೋಜನೆ ಘೋಷಣೆ: ಪುತ್ತೂರು ತಾಲೂಕು ಪತ್ರಕರ್ತರ ಸಂಘದಿಂದ 23 ಸದಸ್ಯರ ಹೆಸರಿನಲ್ಲಿ ₹ 34ಲಕ್ಷ ರೂ. ಮೊತ್ತದ ಠೇವಣಿ: ಡಿ.14ರಿಂದ ಅಧಿಕೃತವಾಗಿ ಜಾರಿ

ಪತ್ರಕರ್ತರ ಸಾಮಾಜಿಕ ಮತ್ತು ಕುಟುಂಬ ಭದ್ರತಾ ಯೋಜನೆ ಘೋಷಣೆ: ಪುತ್ತೂರು ತಾಲೂಕು ಪತ್ರಕರ್ತರ ಸಂಘದಿಂದ 23 ಸದಸ್ಯರ ಹೆಸರಿನಲ್ಲಿ ₹ 34ಲಕ್ಷ ರೂ. ಮೊತ್ತದ ಠೇವಣಿ: ಡಿ.14ರಿಂದ ಅಧಿಕೃತವಾಗಿ ಜಾರಿ

ಪುತ್ತೂರು : ರಾಜ್ಯದಲ್ಲೇ ಮೊದಲ ಬಾರಿಗೆ ಗ್ರಾಮೀಣ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿರುವ ಪತ್ರಕರ್ತರ ಜೀವನ ಭದ್ರತೆಗಾಗಿ ಪುತ್ತೂರು ತಾಲೂಕು ಪತ್ರಕರ್ತರ ಸಂಘ ತನ್ನ ಸದಸ್ಯರಿಗೆ 34ಲಕ್ಷ ರೂ. ಮೊತ್ತದ ಯೋಜನೆ ಘೋಷಿಸಿದೆ. ಈ ಯೋಜನೆ 2020ರ ಡಿ.14ರಿಂದ ಅಧಿಕೃತವಾಗಿ ಜಾರಿಗೊಳ್ಳಲಿದೆ ಎಂದು ಪುತ್ತೂರು ತಾಲೂಕು ಪತ್ರಕರ್ತರ ಸಂಘ ಘೋಷಿಸಿಕೊಂಡಿದೆ.

ಡಿ.14ರಂದು ಪುತ್ತೂರು ಪತ್ರಿಕಾಭವನದಲ್ಲಿ ನಡೆದ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ವಿಶೇಷ ಮಹಾಸಭೆಯಲ್ಲಿ ಮಾಹಿತಿ ನೀಡಿದ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ, ಪತ್ರಕರ್ತರ ಸಾಮಾಜಿಕ ಮತ್ತು ಕುಟುಂಬ ಭದ್ರತಾ ಯೋಜನೆ ಎಂಬ ವಿನೂತನ ಯೋಜನೆಯಂತೆ ಪುತ್ತೂರು ತಾ. ಪತ್ರಕರ್ತರ ಸಂಘದ ಸದಸ್ಯತ್ವ ಹೊಂದಿರುವ ಸದಸ್ಯರ ಹೆಸರಿನಲ್ಲಿ ಪುತ್ತೂರು ತಾ. ಪತ್ರಕರ್ತರ ಸಂಘದ ನೇರ ಹಿಡಿತದಲ್ಲಿ ತಲಾ 25 ಸಾವಿರ ರೂ. ಬ್ಯಾಂಕ್ ಡೆಪೊಸಿಟ್ ಮಾಡಿ, ಸದಸ್ಯನಿಗೆ 60 ವರ್ಷ ವಯಸ್ಸು ದಾಟಿದ ನಂತರ ಡೆಪೊಸಿಟ್‌ನ ಪೂರ್ಣ ಪ್ರಮಾಣದ ಲಾಭಾಂಶ ದೊರೆಯಲಿದೆ. ಈ ಮೂಲಕ ಪುತ್ತೂರು ತಾಲೂಕು ಪತ್ರಕರ್ತರ ಸಂಘದ 23 ಸದಸ್ಯ ಪತ್ರಕರ್ತರು 34ಲಕ್ಷ ರೂ. ಮೊತ್ತದ ಫಲಾನುಭವವನ್ನು ಪಡೆಯಲಿದ್ದಾರೆ. ಕರ್ತವ್ಯ ಸಂದರ್ಭ ಅಪಘಾತ, ಮಾರಣಾಂತಿಕ ದಾಳಿ- ಹಲ್ಲೆ ಘಟನೆ ಸಂಭವಿಸಿದ್ದಲ್ಲಿ ಚಿಕಿತ್ಸೆಗಾಗಿ ಸದಸ್ಯನ ಹೆಸರಲ್ಲಿರುವ ಡೆಪೊಸಿಟ್ ಆಧಾರದಲ್ಲಿ ಗರಿಷ್ಠ 20 ಸಾವಿರ ರೂ. ತುರ್ತು ವೈಯಕ್ತಿಕ ಸಾಲ ಪಡೆಯಲು ಅರ್ಹತೆ ನೀಡಲಾಗಿದೆ ಎಂದು ಶ್ರವಣ್ ಕುಮಾರ್ ತಿಳಿಸಿದ್ದಾರೆ.

ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಐ.ಬಿ ಸಂದೀಪ್ ಕುಮಾರ್, ಜತೆ ಕಾರ್ಯದರ್ಶಿ ಅಜಿತ್, ಕೋಶಾಧಿಕಾರಿ ಕೃಷ್ಣಪ್ರಸಾದ್ ಬಲ್ನಾಡ್, ಉಪ್ಯಾಕ್ಷರಾದ ಸರ್ವೇಶ್ ಕುಮಾರ್ ಉಪ್ಪಿನಂಗಡಿ, ಅನೀಶ್ ಕುಮಾರ್ ಮರಿಲ್ ಉಪಸ್ಥಿತರಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!