ಕಳ್ಳರು ಆರಂಭದಲ್ಲಿ ಜೌಷಧಾಲಯವೊಂದರ ಶಟರ್‌ನ್ನು ಕಬ್ಬಿಣದ ರಾಡ್‌ನಿಂದ ಮುರಿದು ಒಳ ನುಗ್ಗಿ, ಜೌಷಧಾಲಯದ ಮಣ್ಣಿನ ಗೋಡೆಯನ್ನು ಕೊರೆದು ಸಮೀಪದ ಹಾರ್ಡ್ ವೇರ್ ಗೋದಾಮಿಗೆ ಪ್ರವೇಶಿಸಿದ್ದಾರೆ. ನಂತರ ಶಾರದ ಜುವೆಲ್ಲರ್ಸ್ ಗೆ ನುಗ್ಗಲು ಯತ್ನಿಸಿದ್ದಾರೆ.
ಆದರೆ ಜ್ಯುವೆಲ್ಲರಿ ಮಾಲಕರು ಮೇಲ್ಛಾವಣಿ ಹಾಗೂ ತಮ್ಮ ಗೋಡೆಗೆ ಕಬ್ಬಿಣದ ರಕ್ಷಣಾತ್ಮಕ ವ್ಯವಸ್ಥೆ ಅಳವಡಿಸಿದ್ದರಿಂದ ಕಳ್ಳರಿಗೆ ಗೋಡೆಯನ್ನು ಕೊರೆಯಲು ಸಾಧ್ಯವಾಗಿಲ್ಲ ಎಂದು ಮಾಹಿತಿ ಸಿಕ್ಕಿದೆ. ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್ ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.