ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಪ್ರಥಮ ಪಿಯುಸಿ ದಾಖಲಾತಿ ಜುಲೈ 12 ರಿಂದ 30 ರವರೆಗೆ ವಿಸ್ತರಣೆ: ಹೊಸ ಆದೇಶ ಹೊರಡಿಸಿದ ರಾಜ್ಯ ಸರ್ಕಾರ.

ಪ್ರಥಮ ಪಿಯುಸಿ ದಾಖಲಾತಿ ಜುಲೈ 12 ರಿಂದ 30 ರವರೆಗೆ ವಿಸ್ತರಣೆ: ಹೊಸ ಆದೇಶ ಹೊರಡಿಸಿದ ರಾಜ್ಯ ಸರ್ಕಾರ.

 

 

 

 

ಬೆಂಗಳೂರು: ಪ್ರಥಮ ಪಿಯುಸಿ ದಾಖಲಾತಿ ದಿನಾಂಕವನ್ನು ವಿಸ್ತರಿಸಿ ಸರ್ಕಾರ ಪ್ರಕಟಣೆ ಹೊರಡಿಸಿದೆ. 2022-23ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿಗೆ ಸಂಬಂಧಿಸಿದಂತೆ ದಾಖಲಾತಿ ದಿನಾಂಕವನ್ನು ಈ ಮೊದಲು ಜುಲೈ 11 ರವರೆಗೆ ದಂಡರಹಿತವಾಗಿ ವಿಸ್ತರಿಸಲಾಗಿತ್ತು. ಆದರೆ ಸಿಬಿಎಸ್‌ಇ ಹಾಗೂ ಐಸಿಎಸ್‌ಸಿ ಬೋರ್ಡ್‌ಗಳಲ್ಲಿ 10ನೇ ತರಗತಿ ಫಲಿತಾಂಶ ಪ್ರಕಟಣೆ ತಡವಾಗುತ್ತಿದ್ದು ಹಾಗೂ ಪೋಷಕರು ಹಾಗೂ ವಿದ್ಯಾರ್ಥಿಗಳು ದಾಖಲಾತಿ ದಿನಾಂಕವನ್ನು ವಿಸ್ತರಿಸಲು ಮನವಿ ಸಲ್ಲಿಸಿ ಒತ್ತಾಯಿಸಿರುವ ಕಾರಣ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.

 

 

 

ಹೀಗಾಗಿ, ದಂಡ ಶುಲ್ಕರಹಿತವಾಗಿ ಪ್ರಥಮ ಪಿಯುಸಿ ದಾಖಲಾತಿ ದಿನಾಂಕವನ್ನು ಜುಲೈ 12 ರಿಂದ 30 ರವರೆಗೆ ವಿಸ್ತರಿಸಲಾಗಿದೆ. ಈ ವಿಸ್ತರಣೆ ದಿನಾಂಕ ಪ್ರಥಮ ಪಿಯುಸಿ ದಾಖಲಾತಿಗೆ ಮಾತ್ರ ಅನ್ವಯಿಸಲಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!