Home › ಬಾರ್ಯ ಗ್ರಾಮ ಪಂಚಾಯತ್‌ನಲ್ಲಿ ವಿಕಲಚೇತನರ ಸಮನ್ವಯ ವಿಶೇಷ ಗ್ರಾಮ ಸಭೆ
ಬಾರ್ಯ ಗ್ರಾಮ ಪಂಚಾಯತ್‌ನಲ್ಲಿ ವಿಕಲಚೇತನರ ಸಮನ್ವಯ ವಿಶೇಷ ಗ್ರಾಮ ಸಭೆ
ONLINE PUDU / Friday, February 17, 2023
ಬಾರ್ಯ: ಗ್ರಾಮ ಪಂಚಾಯತ್‌ನಲ್ಲಿ ಫೆ.15ರಂದು ವಿಕಲಚೇತನರ ಸಮನ್ವಯ ವಿಶೇಷ ಗ್ರಾಮ ಸಭೆ ನಡೆಯಿತು. ಬೆಳ್ತಂಗಡಿ ತಾಲೂಕು ವಿವಿದೋದ್ದೇಶ ಕಾರ್ಯಕರ್ತರು ವಿಕಲಚೇತನರಿಗೆ ಸಿಗುವ ಸೌಲಭ್ಯದ ಬಗ್ಗೆ ಮತ್ತು ಎಂಡೋಸಲ್ಫಾನ್ ಪೀಡಿತರಿಗೆ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿ ಚರ್ಚಿಸಿದರು. ಬಾರ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ವಿಶೇಷ ಚೇತನರಿಗೆ ಹಿತವಚನವನ್ನು ನೀಡಿದರು. ಬಾರ್ಯ ಗ್ರಾಮ ಪಂಚಾಯತ್‌ನ V.R.W ಬಾರ್ಯ ಗ್ರಾಮ ವ್ಯಾಪ್ತಿಯ ವಿಕಲಚೇತನರ ವರದಿ ವಾಚಿಸಿದರು.
ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿ ಸುಶೀಲ, ಅಧ್ಯಕ್ಷೆ ಉಷಾಕಿರಣ, ಉಪಾಧ್ಯಕ್ಷ ಪಿ ಕೆ. ಉಸ್ಮಾನ್, ಜಾನ್ ಬ್ಯಾಪಿಸ್ಟ್, ಸರ್ವ ಸದಸ್ಯರು, ಬೆಳ್ತಂಗಡಿ ತಾಲೂಕು ವಿವಿದೂದ್ದೇಶ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಗ್ರಾಮೀಣ ಪುರ್ನವಸತಿ ಕಾರ್ಯಕರ್ತರು, ರಾಧಿಕಾ ಇಳಂತಿಲ, ಸುಲೋಚನ ಕುವೆಟ್ಟು, ಸೌಮ್ಯ ತಣ್ಣಿರುಪಂಥ ಭಾಗವಹಿಸಿದರು.