Home › ಅಮೇಜಾನ್ ಕಾಡಿನಲ್ಲಿ ವಿಶ್ವದ ಅತೀ ದೊಡ್ಡ ಸರ್ಪ ಪತ್ತೆ..!: 26 ಅಡಿ ಉದ್ದ, 200 ಕೆ.ಜಿ ತೂಕ..!
ಅಮೇಜಾನ್ ಕಾಡಿನಲ್ಲಿ ವಿಶ್ವದ ಅತೀ ದೊಡ್ಡ ಸರ್ಪ ಪತ್ತೆ..!: 26 ಅಡಿ ಉದ್ದ, 200 ಕೆ.ಜಿ ತೂಕ..!
ONLINE PUDU / Thursday, February 22, 2024
ನವದೆಹಲಿ: ವನ್ಯಜೀವಿ ನಿರೂಪಕ ಪ್ರೊಫೆಸರ್ ಫ್ರೀಕ್ ವೊಂಕ್ ಅವರು ಭಾರಿ ಗಾತ್ರದ ಅನಕೊಂಡವನ್ನು ಕಂಡುಹಿಡಿದಿದ್ದಾರೆ.
ಅಮೇಜಾನ್ ಕಾಡಿನಲ್ಲಿ ವಿಲ್ ಸ್ಮಿತ್ ಅವರೊಂದಿಗೆ ನ್ಯಾಷನಲ್ ಜಿಯಾಗ್ರಫಿಕ್‌ನ ಡಿಸ್ನಿ ಪ್ಲಸ್ ಸರಣಿ ‘ಪೋಲ್ ಟು ಪೋಲ್’ ಸಾಹಸದ ಸಮಯದಲ್ಲಿ ವಿಶ್ವದ ಅತೀ ದೊಡ್ಡ ಸರ್ಪ (ಅನಕೊಂಡ) ವನ್ನು ಹಚ್ಚಿದ್ದಾರೆ. ಅದರ ವೀಡಿಯೋವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಹೊಸ ಹಾವಿಗೆ ‘Unectes Acaima’ ಎಂಬ ಲ್ಯಾಟಿನ್ ಹೆಸರು ನೀಡಿದ್ದಾರೆ. ಇದರರ್ಥ ಉತ್ತರದ ಹಸಿರು ಅನಕೊಂಡ. ಈ ಹಾವು ಬರೋಬ್ಬರಿ 26 ಅಡಿ ಉದ್ದ, 200 ಕೆ.ಜಿ ತೂಕವಿದೆ. ಅದರ ತಲೆ ಮನುಷ್ಯರ ತಲೆಯಷ್ಟೇ ದೊಡ್ಡದಾಗಿದೆ ಎಂದು ಹೇಳಲಾಗಿದೆ.